Monday, June 8, 2026
Homeತಾಜಾ ಸುದ್ದಿಕೊರೊನಾ ಲಸಿಕೆ ಹಾಕಿಸಿಕೊಂಡ ಭಾರತದ ಮೊದಲ ನಟಿ ಇವರೇ..

ಕೊರೊನಾ ಲಸಿಕೆ ಹಾಕಿಸಿಕೊಂಡ ಭಾರತದ ಮೊದಲ ನಟಿ ಇವರೇ..

- Advertisement -
- Advertisement -

ಮುಂಬೈ: ಕೊರೊನಾ ವಿರುದ್ಧ ಲಸಿಕೆ ಅಭಿಯಾನ ಶುರುವಾಗಿದೆ.ಅನೇಕ ದೇಶಗಳಲ್ಲಿ ಈಗಾಗಲೇ ಕೊರೊನಾ ಲಸಿಕೆ ಹಾಕುವ ಕಾರ್ಯ ಶುರುವಾಗಿದೆ. ಭಾರತದಲ್ಲಿ ಕೊರೊನಾ ಲಸಿಕೆ ಡ್ರೈ ರನ್ ನಡೆಯುತ್ತಿದೆ. ಗೋಪಿ ಕಿಶನ್, ಆಂಖೆ, ಬೆವಾಫಾ ಸನಮ್ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿರುವ ನಟಿ ಶಿಲ್ಪಾ ಶಿರೋಡ್ಕರ್ ಕೊರೊನಾ ಲಸಿಕೆ ಹಾಕಿಸಿಕೊಂಡ ಮೊದಲ ಬಾಲಿವುಡ್ ನಟಿಯಾಗಿದ್ದಾರೆ.

ಶಿಲ್ಪಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದಾರೆ. ವ್ಯಾಕ್ಸಿನೇಷನ್ ನಂತರ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವ ಶಿಲ್ಪಾ ತೋಳಿನ ಮೇಲೆ ಸಣ್ಣ ಬ್ಯಾಂಡೇಜ್ ಇದೆ. ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾ ಪೋಸ್ಟರ್ ವೈರಲ್ ಆಗಿದೆ.

ಶಿಲ್ಪಾ ಬಿಟ್ಟರೆ ಬೇರೆ ಯಾವ ಭಾರತೀಯ ನಟಿಯರೂ ಲಸಿಕೆ ಹಾಕಿಸಿಕೊಂಡಿಲ್ಲ. ಶಿಲ್ಪಾ ದುಬೈನಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ. 2000ರಲ್ಲಿ ಮದುವೆಯಾದ ಶಿಲ್ಪಾ ಕೆಲ ವರ್ಷಗಳ ಕಾಲ ಭಾರತದಲ್ಲಿದ್ದರು. ಈಗ ಪತಿ ಜೊತೆ ದುಬೈನಲ್ಲಿ ವಾಸವಾಗಿದ್ದಾರೆ. ಶಿಲ್ಪಾ ಶಿರೋಡ್ಕರ್ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಪತ್ನಿ ನಮೃತಾ ಶಿರೋಡ್ಕರ್ ರ ಸಹೋದರಿ.

- Advertisement -

Latest News

error: Content is protected !!