Thursday, June 4, 2026
Homeಕರಾವಳಿಸುಳ್ಯ: ಸದಾನಂದ ಗೌಡ ಭೂಮಿ ಮೇಲೆ ಇದ್ದಾರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್: ಅಲರ್ಟ್...

ಸುಳ್ಯ: ಸದಾನಂದ ಗೌಡ ಭೂಮಿ ಮೇಲೆ ಇದ್ದಾರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್: ಅಲರ್ಟ್ ಆದ ಮಾಜಿ ಸಿಎಂ: ಇಂದು ಪ್ರವೀಣ್ ನೆಟ್ಟಾರು ನಿವಾಸಕ್ಕೆ ಭೇಟಿ ನೀಡಲಿರುವ ಡಿವಿಎಸ್

- Advertisement -
- Advertisement -

ಸುಳ್ಯ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಸಿಎಂ ಆದಿಯಾಗಿ ಅನೇಕ ಸಚಿವರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಆದರೆ ಸ್ಥಳೀಯರೇ ಆದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವರಾದ ಸದಾನಂದ ಗೌಡ ಅವರು ಇದುವರೆಗೂ ಭೇಟಿ ನೀಡಿಲ್ಲ. ಹೀಗಾಗಿ ಸದಾನಂದ ಗೌಡ ಭೂಮಿ ಮೇಲೆ ಇದ್ದಾರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗ್ತಿದೆ. ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಸದಾನಂದ ಗೌಡ ಅವರು ಇಂದು ಪ್ರವೀಣ್ ನೆಟ್ಟಾರು ನಿವಾಸಕ್ಕೆ ಆಗಮಿಸುತ್ತಿದ್ದಾರೆ.

ಮಧ್ಯಾಹ್ನ ಪ್ರವೀಣ್ ಮನೆಗೆ ತಲುಪುವ ಕುರಿತಂತೆ ತಮ್ಮ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರವೀಣ್ ಹತ್ಯೆಗೀಡಾಗಿದ್ದ ವಿಷಯ ಗೊತ್ತಾಗಿದ್ದರೂ ಪ್ರವೀಣ್ ಮನೆಗೆ ಭೇಟಿ ಕೊಡದ ಸದಾನಂದ ಗೌಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

- Advertisement -

Latest News

error: Content is protected !!