Saturday, June 6, 2026
Homeಪ್ರಮುಖ-ಸುದ್ದಿನನಗೆ ಕೆಪಿಸಿಸಿ ಕಚೇರಿ ದೇಗುಲ ನಾನು ಯಾವುದೇ ದೇವಸ್ಥಾನಕ್ಕೂ ಹೋಗಲ್ಲ, ತಿಹಾರ್ ಜೈಲಿನಿಂದ ಬಂದಾಗಲೂ ನಾನು...

ನನಗೆ ಕೆಪಿಸಿಸಿ ಕಚೇರಿ ದೇಗುಲ ನಾನು ಯಾವುದೇ ದೇವಸ್ಥಾನಕ್ಕೂ ಹೋಗಲ್ಲ, ತಿಹಾರ್ ಜೈಲಿನಿಂದ ಬಂದಾಗಲೂ ನಾನು ಕಾಂಗ್ರೆಸ್ ಕಚೇರಿಗೆ ಮೊದಲು ಹೋಗಿದ್ದೆ- ಡಿಕೆಶಿ

- Advertisement -
- Advertisement -

ಬೆಂಗಳೂರು : ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಇವತ್ತು ಅಧಿಕಾರ ಸ್ವೀಕರಿಸಿಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ  ವರ್ಚುಯಲ್ ರ್ಯಾಲಿ ಮೂಲಕ ಬರೋಬ್ಬರಿ 10 ಲಕ್ಷ ಮಂದಿ ಕಾರ್ಯಕರ್ತರ ಸಮ್ಮುಖದಲ್ಲಿ ಶಿವಕುಮಾರ್ ಅವರು ಕೆಪಿಸಿಸಿಯ 41ನೇ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. 

ಈಗಾಗಲೇ ಸದಾಶಿವ ನಗರದ ತಮ್ಮ ನಿವಾಸಿದಿಂದ ಡಿ ಕೆ ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯತ್ತ ತೆರಳಿದ್ದಾರೆ. ಈ ವೇಳೆ ಮಾಧ್ಯಮದವರು ಡಿ ಕೆ ಶಿವಕುಮಾರ್ ಅವರನ್ನು ಈಗ ದೇವಸ್ಥಾನಕ್ಕೆ ಭೇಟಿ ನೀಡುತ್ತೀರಾ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್ ನಾನು ಯಾವ ದೇಗುಲಕ್ಕೂ ಭೇಟಿ ನೀಡೋದಿಲ್ಲ. ನನಗೆ ಕೆಪಿಸಿಸಿ ಕಚೇರಿಯೇ  ದೇವಸ್ಥಾನ. ನಾನು ತಿಹಾರ್ ಜೈಲಿನಿಂದ ಬಂದಾಗಲೂ ಮೊದಲು ಕೆಪಿಸಿಸಿ ಕಚೇರಿಗೆಯೇ ಭೇಟಿ ಕೊಟ್ಟಿದ್ದೆ. ಈಗಲೂ ನಾನು ಮನೆಯಿಂದ ನೇರವಾಗಿ ಕೆಪಿಸಿಸಿ ಕಚೇರಿಗೇ ತೆರಳುತ್ತೇನೆ ಎಂದಿದ್ದಾರೆ.

- Advertisement -

Latest News

error: Content is protected !!