Monday, June 29, 2026
Homeತಾಜಾ ಸುದ್ದಿಆಗಸ್ಟ್‌ 1ರೊಳಗೆ ಸರ್ಕಾರಿ ಬಂಗಲೆ ಖಾಲಿ ಮಾಡಿ- ಪ್ರಿಯಾಂಕ ಗಾಂಧಿಗೆ ಕೇಂದ್ರ ಸೂಚನೆ

ಆಗಸ್ಟ್‌ 1ರೊಳಗೆ ಸರ್ಕಾರಿ ಬಂಗಲೆ ಖಾಲಿ ಮಾಡಿ- ಪ್ರಿಯಾಂಕ ಗಾಂಧಿಗೆ ಕೇಂದ್ರ ಸೂಚನೆ

- Advertisement -
- Advertisement -

ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆಯನ್ನು ಈಗಾಗಲೆ ಹಿಂಪಡೆಯಲಾಗಿರುವ ಹಿನ್ನೆಲೆಯಲ್ಲಿ ಲೋಧಿ ಎಸ್ಟೇಟ್‌ನಲ್ಲಿ ಸರ್ಕಾರದಿಂದ ನೀಡಲಾಗಿರುವ ಮನೆಯನ್ನು ಒಂದು ತಿಂಗಳೊಳಗೆ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.
ಕಳೆದ ವರ್ಷ ನವಂಬರ್ ನಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಅವರಿಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿತ್ತು. ಅದೇ ರೀತಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಎಸ್ಪಿಜಿ ಭದ್ರತೆಯನ್ನು ಕೈಬಿಡಲಾಗಿದ್ದು ಪ್ರಸ್ತುತ ಪ್ರಧಾನಿ ಮೋದಿ ಮಾತ್ರ ಎಸ್ಪಿಜಿ ಭದ್ರತೆ ಹೊಂದಿದ್ದಾರೆ. ಈಗ ಪ್ರಿಯಾಂಕಾ ಗಾಂಧಿಯವರಿಗೆ ಒಂದು ತಿಂಗಳು ವಿನಾಯಿತಿ ನೀಡಿ ಮನೆ ಖಾಲಿ ಮಾಡಲು ಸೂಚನೆ ನೀಡಲಾಗಿದೆ.

- Advertisement -

Latest News

error: Content is protected !!