Tuesday, June 23, 2026
HomeWorldವಿಶ್ವಸಂಸ್ಥೆಯ 80ನೇ ಮಹಾಧಿವೇಶನಕ್ಕೆ ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಗೆ ಸ್ಥಾನ; ಪಿಪಿ ಚೌಧರಿ ನೇತೃತ್ವದಲ್ಲಿ ಭಾರತದಿಂದ ಅಮೆರಿಕಕ್ಕೆ 15 ಸಂಸದರ...

ವಿಶ್ವಸಂಸ್ಥೆಯ 80ನೇ ಮಹಾಧಿವೇಶನಕ್ಕೆ ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಗೆ ಸ್ಥಾನ; ಪಿಪಿ ಚೌಧರಿ ನೇತೃತ್ವದಲ್ಲಿ ಭಾರತದಿಂದ ಅಮೆರಿಕಕ್ಕೆ 15 ಸಂಸದರ ನಿಯೋಗ 

- Advertisement -
- Advertisement -

ಅಮೆರಿಕದ ನ್ಯೂಯಾರ್ಕಿನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ 80ನೇ ಮಹಾಧಿವೇಶನಕ್ಕೆ ಕರ್ನಾಟಕದಿಂದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸ್ಥಾನ ಪಡೆದಿದ್ದಾರೆ.

ಭಾರತದಿಂದ ಈ ಬಾರಿ ಬಿಜೆಪಿ ಸಂಸದ ಪಿಪಿ ಚೌಧರಿ ಮತ್ತು ಪುರಂದರೇಶ್ವರಿ ನೇತೃತ್ವದಲ್ಲಿ ತಲಾ 15 ಸಂಸತ್ ಸದಸ್ಯರು ಇರುವ ನಿಯೋಗ ತೆರಳಲಿದ್ದು, ಅಧಿವೇಶನವು ಅ.8ರಿಂದ 14ರ ನಡುವೆ ನಡೆಯಲಿದೆ.  

ನಿಯೋಗದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿದಂತೆ ಅನಿಲ್ ಬಲೂನಿ, ನಿಶಿಕಾಂತ್ ದುಬೆ, ಉಜ್ವಲ್ ನಿಕ್ಕಮ್, ಎಸ್.ಫಂಗ್ನಾನ್ ಕೊನ್ಯಾಕ್, ಮೇಧಾ ವಿಶ್ರಾಮ್ ಕುಲಕರ್ಣಿ, ಪೂನಂ ಬೆನ್ ಮಾದಮ್, ವಂಶಿ ಕೃಷ್ಣ ಗದ್ದಾಮ್, ವಿವೇಕ್ ತನ್ಕಾ, ಟಿ.ಸುಮತಿ, ಸ್ರೀಭರತ್ ಮತ್ಕುಮಿಲಿ, ಕುಮಾರಿ ಸೆಲ್ಜಾ, ಎನ್.ಕೆ.ಪ್ರೇಮಚಂದ್ರನ್ ಮತ್ತು ರಾಜೀವ್ ರಾಯ್  ಅವರಿರಲಿದ್ದಾರೆ.

ನಿಯೋಗದ ಮುಖ್ಯ ಉದ್ದೇಶ: ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಉತ್ತಮ ಪಡಿಸುವುದರ ಜೊತೆಗೆ ಜಾಗತಿಕ ಮಟ್ಟದ ಸಭೆಯಲ್ಲಿ ಭಾರತವನ್ನು ಅಧಿಕಾರಿಗಳ ಹೊರತಾಗಿ ಪ್ರತಿನಿಧಿಸುವುದು.
ವಿಶ್ವಸಂಸ್ಥೆಯಲ್ಲಿ ಸಂಸದೀಯ ಪ್ರಜಾಪ್ರಭುತ್ವ ದೇಶದ ಪ್ರತಿನಿಧಿಗಳಾಗಿ ಪ್ರಜಾತಂತ್ರದ ಮೌಲ್ಯಗಳನ್ನು ಪ್ರಚುರಪಡಿಸುವುದು ಈ ನಿಯೋಗದ ಉದ್ದೇಶವಾಗಿರುತ್ತದೆ. 

ವಿಶ್ವಸಂಸ್ಥೆಯ ಈ ಅಧಿವೇಶನವು ಜಗತ್ತಿನ ಎಲ್ಲ ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ಏಕಮಾತ್ರ ಸಭೆಯಾಗಿದೆ. ಒಟ್ಟಾಗಿ 193 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.  ಶ್ವಸಂಸ್ಥೆ ಪ್ರಧಾನ ಕಚೇರಿಯಿರುವ ನ್ಯೂಯಾರ್ಕಿನಲ್ಲಿ ಒಂದು ತಿಂಗಳ ಕಾಲ ಮಹಾಧಿವೇಶನ ನಡೆಯುತ್ತದೆ.

- Advertisement -

Latest News

error: Content is protected !!