Saturday, June 27, 2026
Homeಮನರಂಜನೆಛಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೆ ಬಂದ ಹೊಸ ಗೆಸ್ಟ್ ಯಾರು?

ಛಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೆ ಬಂದ ಹೊಸ ಗೆಸ್ಟ್ ಯಾರು?

- Advertisement -
- Advertisement -

ಮೈಸೂರು: ಲಾಕ್ ಡೌನ್ ಬಳಿಕ ಬಹುತೇಕ ಸ್ಟಾರ್ ಗಳಿಗೆ ಕೊಂಚ ವಿಶ್ರಾಂತಿ ಸಿಕ್ಕಿದೆ. ಲಾಕ್ ಡೌನ್ ರಿಲೀಸ್ ಆದ್ರೂ ಕೊರೊನಾ ಆರ್ಭಟ ಮಾತ್ರ ಕಮ್ಮಿಯಾಗದೇ ಇರೋದರಿಂದ ಬಹುತೇಕ ಸ್ಟಾರ್ ಗಳು ಸಿನಿಮಾ ಶೂಟಿಂಗ್ ನಿಂದ ದೂರವಾಗಿ ಮನೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ಡಿ ಬಾಸ್ ದರ್ಶನ್ ಅಂತೂ ಮೊದಲಿನಿಂದಲೂ ಹಾಗೇ ಶೂಟಿಂಗ್ ಇಲ್ಲ ಫ್ರೀ ಇದ್ದಾರೆ ಅಂದ್ರೆ ಸಾಕು ತಮ್ಮ ಫಾರ್ಮ್ ಹೌಸ್ ನಲ್ಲೇ ಕಾಲ ಕಳೆಯುತ್ತಾರೆ.

ಅವರಿಗೆ ಪ್ರಾಣಿ ಪಕ್ಷಿಗಳ ಜೊತೆಗೆ ಸಮಯ ಕಳೆಯೋದಕ್ಕಿಂತ ಖುಷಿ ಬೇರಿಲ್ಲ. ಜೊತೆಗ ಹೊಸ ಬೈಕ್ , ಕಾರುಗಳನ್ನು ಖರೀದಿ ಮಾಡೋದು ಅದರಲ್ಲಿ ಒಂದೆರಡು ರೌಂಡ್ ಹಾಕೋದು ಅಂದ್ರೆ ದರ್ಶನ್ ಅವರಿಗೆ ವಿಪರೀತ ಕ್ರೇಜ್. ಇದೀಗ ದರ್ಶನ್ ಅವರು ಹೊಸ ವಾಹನವೊಂದನ್ನು ಖರೀದಿ ಮಾಡಿದ್ದಾರೆ. ಅಂದ್ಹಾಗೆ ಅದು ಕಾರಂತೂ ಅಲ್ಲ, ಬೈಕ್ ಅಂತೂ ಅಲ್ವೇ ಅಲ್ಲ. ಅಂದ್ಹಾಗೆ ದರ್ಶನ್ ಖರೀದಿ ಮಾಡಿರೋದು ಟ್ರ್ಯಾಕ್ಟರ್ ನ್ನು. ತಮ್ಮ ಫಾರ್ಮ್ ಹೌಸ್ ಗೆ ಹೊಸ ಟ್ರ್ಯಾಕ್ಟರ್ ನ್ನು ಖರೀದಿಸಿದ್ದಾರೆ ಡಿ ಬಾಸ್. ದರ್ಶನ್ ಅವರು ಹೊಸ ಟ್ರ್ಯಾಕ್ಟರ್ ಖರೀದಿ ಮಾಡಿರುವ ಫೋಟೋವನ್ನು ಅವರ ಅಭಿಮಾನಿಗಳು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ.

- Advertisement -

Latest News

error: Content is protected !!