Wednesday, June 3, 2026
Homeಕರಾವಳಿಉಡುಪಿಮಂಗಳೂರಿನಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಬೋಟ್ ನಲ್ಲಿ ಸಿಲಿಂಡರ್ ಸ್ಫೋಟ

ಮಂಗಳೂರಿನಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಬೋಟ್ ನಲ್ಲಿ ಸಿಲಿಂಡರ್ ಸ್ಫೋಟ

- Advertisement -
- Advertisement -

ಮಂಗಳೂರು: ನವ ಮಂಗಳೂರಿನ ಪಶ್ಚಿಮ ಭಾಗದ ತೀರದಲ್ಲಿ 11 ಮೀನುಗಾರರನ್ನು ಸೋಮವಾರ ಭಾರತೀಯ ಕರಾವಳಿ ಪಡೆ ರಕ್ಷಿಸಿದೆ. ಸಿಲಿಂಡರ್ ಸ್ಫೋಟದಿಂದ ದೋಣಿಗಳು ಸ್ಫೋಟಗೊಂಡು ಬೆಂಕಿ ಹತ್ತಿಕೊಂಡು ಮೀನುಗಾರರು ಸಿಕ್ಕಿಹಾಕಿಕೊಂಡಿದ್ದರು.

ಘಟನೆ ಬಗ್ಗೆ ಮಾಹಿತಿ ನೀಡಿರುವ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ದೋಣಿಯಲ್ಲಿದ್ದ ಸಿಲಿಂಡರ್ ಸ್ಫೋಟವಾಗಿದ್ದು, ಭಾರತೀಯ ಕರಾವಳಿಯ ರಕ್ಷಣಾ ಪಡೆಯವರು ಎಲ್ಲಾ 11 ಮೀನುಗಾರರನ್ನು ರಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮುಂಬೈನಿಂದ ಸಾಚೇತ್ ಮತ್ತು ಸುಜಿತ್ ಎಂಬೆರಡು ಕಾವಲು ನೌಕೆಗಳನ್ನು ತರಿಸಿ, ಮೀನುಗಾರರ ಜೀವವನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಕಾಪಾಡಿದೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!