Sunday, June 7, 2026
Homeತಾಜಾ ಸುದ್ದಿಭವಾನಿ ರೇವಣ್ಣಗೆ ಬಿಜೆಪಿ ಟಿಕೆಟ್‌ ಆಫರ್‌ ನೀಡಿದ ಸಿ.ಟಿ. ರವಿ

ಭವಾನಿ ರೇವಣ್ಣಗೆ ಬಿಜೆಪಿ ಟಿಕೆಟ್‌ ಆಫರ್‌ ನೀಡಿದ ಸಿ.ಟಿ. ರವಿ

- Advertisement -
- Advertisement -

ಚಿಕ್ಕಮಗಳೂರು: ಹಾಸನ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ಗಾಗಿ ದೇವೇಗೌಡರ ಕುಟುಂಬದಲ್ಲೇ ಫೈಟ್‌ ನಡೆಯುತ್ತಿದೆ. ಒಂದು ಕಡೆ ಭವಾನಿ ರೇವಣ್ಣ ನಾನೇ ಹಾಸನ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಅಂತ ಹೇಳಿಕೊಂಡು ಬರ್ತಿದಾರೆ. ಇನ್ನೊಂದು ಕಡೆ ಪಕ್ಷದಲ್ಲೇ ಸಮರ್ಥ ಅಭ್ಯರ್ಥಿಗಳು ಬೇರೆ ಇದ್ದಾರೆ. ಹಾಗಾಗಿ ಕುಟುಂಬದವರಿಗೆ ಅವಕಾಶ ನೀಡಲ್ಲ ಅಂತ ಕುಮಾರಸ್ವಾಮಿಯವರು ಹೇಳಿದ್ದಾರೆ. ಈ ನಡುವೆ ಭವಾನಿ ರೇವಣ್ಣಗೆ ಬಿಜೆಪಿಗೆ ಬರುವಂತೆ ಶಾಸಕ ಸಿಟಿ ರವಿ ಆಫರ್‌ ಕೊಟ್ಟಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸಿಟಿ ರವಿ, ಭವಾನಿಯವರು ಹೊಳೆನರಸೀಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಲಿ ಎಂದಿದ್ದಾರೆ. ಹೊಳೆನರಸೀಪುರದಲ್ಲಿ ಅವರಿಗಿಂತ ಉತ್ತಮ ಅಭ್ಯರ್ಥಿ ಬೇರೆ ಯಾರೂ ಇಲ್ಲ. ಹಾಗಾಗಿ ಭವಾನಿ ಅವರು ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಲಿ ಎಂದು ಸಿಟಿ ರವಿ ಆಫರ್‌ ನೀಡಿದ್ದಾರೆ.

- Advertisement -

Latest News

error: Content is protected !!