- Advertisement -
![]()
- Advertisement -
ಉಡುಪಿ: ದನದ ಕೊಟ್ಟಿಗೆಯಲ್ಲಿದ್ದ ದನ ಹಾಗೂ ಕರುವನ್ನು ರಾತ್ರೋರಾತ್ರಿ ಕಳ್ಳತನ ಮಾಡಿರುವ ಘಟನೆ ಅಂಪಾರು ಗ್ರಾಮದಲ್ಲಿ ನಡೆದಿದೆ.
ಕೆ. ಕೇಶವ ಕಿಣಿ (64) ಅವರು ಹಾಲಿನ ಉಪಯೋಗಕ್ಕಾಗಿ ಹಟ್ಟಿಯಲ್ಲಿ 4 ದನಗಳನ್ನು ಸಾಕುತ್ತಿದ್ದರು ವೇಳೆ, 13-03-2026 ರ ರಾತ್ರಿ 11:30 ಗಂಟೆಗೆ ಹಟ್ಟಿಯನ್ನು ಪರಿಶೀಲಿಸಿದಾಗ ಎಲ್ಲಾ ದನಗಳು ಇದ್ದವು. ಬೆಳಿಗ್ಗೆ 14-03-2026 ರ ಬೆಳಿಗ್ಗೆ 4:00 ಗಂಟೆಗೆ ಹಟ್ಟಿಯ ಬಾಗಿಲನ್ನು ತೆರೆದಾಗ 10 ವರ್ಷದ ಕಂದು ಹೆಣ್ಣು ದನ ಮತ್ತು 4 ವರ್ಷದ ಕಪ್ಪು ಗಂಡು ನಾಪತ್ತೆಯಾಗಿರೋದು ಗೊತ್ತಾಗಿದೆಯ ಕಳುವಾದ ದನಗಳ ಒಟ್ಟು ಮೌಲ್ಯ ₹14,000 ಎನ್ನಲಾಗಿದೆ. ಈ ಘಟನೆ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
- Advertisement -


