Tuesday, June 23, 2026
Homeಅಪರಾಧಕಾಡಿನಲ್ಲಿ ಹಸುವನ್ನು ಕಡಿದು ಮಾಂಸ ಮಾರಾಟ: 50 ಕೆ.ಜಿ ದನದ ಮಾಂಸದ ಜೊತೆಗೆ ಪರಿಕರಗಳು...

ಕಾಡಿನಲ್ಲಿ ಹಸುವನ್ನು ಕಡಿದು ಮಾಂಸ ಮಾರಾಟ: 50 ಕೆ.ಜಿ ದನದ ಮಾಂಸದ ಜೊತೆಗೆ ಪರಿಕರಗಳು ಪೊಲೀಸ್ ವಶಕ್ಕೆ

- Advertisement -
- Advertisement -

ಮೂಡುಬಿದಿರೆ: ದಿನಾಂಕ 06/10/2025 ರಂದು ಖಚಿತ ವರ್ತಮಾನದ ಮೇರೆಗೆ ಮೂಡಬಿದ್ರೆ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ಮತ್ತು ಅಪರಾಧ ವಿಭಾಗದ ಸಿಬ್ಬಂಧಿಗಳಾದ ಪಿ.ಎಸ್.ಐ ಕೃಷ್ಣಪ್ಪ, ಅಖಿಲ್ ಅಹಮ್ಮದ್, ನಾಗರಾಜ್ ರವರು ಗಂಟಾಲ್ ಕಟ್ಟೆಯ ಜಲೀಲ್ ಎಂಬುವರ ಮನೆಯ ಹಿಂಭಾಗದ ಗುಡ್ಡೆಯ ಕಾಡಿನಲ್ಲಿ ಹಸುವನ್ನು ಕಡಿದು ಮಾಂಸ ಮಾಡುತ್ತಿದ್ದಾರೆ ಎಂದು ತಿಳಿದು ದಾಳಿ ಮಾಡಿದಾಗ ದನವನ್ನು ಕಡಿದು ಮಾಂಸವನ್ನು ಮಾಡುತ್ತಿದ್ದುದು ಕಂಡು ಬಂದಿರುತ್ತದೆ.

ಸ್ಥಳದಲ್ಲಿದ್ದ ಸುಮಾರು 50 ಕೆ.ಜಿ ದನದ ಮಾಂಸ ಮತ್ತು ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಮತ್ತು ಕಡಿಯಲು ಕದ್ದು ತಂದಿದ್ದ 3 ದನಗಳನ್ನು ರಕ್ಷಿಸಿ ಗೋಶಾಲೆಗೆ ಬಿಡಲಾಗಿದೆ. ಆರೋಪಿಗಳನ್ನು ಜಲೀಲ್ ಕಲ್ಲಬೆಟ್ಟು, ಸಾಹಿಲ್ ಮತ್ತು ಆತನ ಮಗ ಸೊಹೇಲ್ ಮತ್ತು ಕುದ್ರೋಳಿ ನಿವಾಸಿ ಮೊಹಮ್ಮದ್ ಅಶ್ರಫ್ ಎಂದು ಗುರುತಿಸಿದ್ದು, ಆರೋಪಿಗಳು ಮನೆಯ ಹಿಂಬದಿ ಗುಡ್ಡೆಯಲ್ಲಿ ಪರಾರಿಯಾಗಿರುತ್ತಾರೆ. ಮತ್ತು ಸ್ಥಳದಲ್ಲಿದ್ದ ಮಾಂಸ ಪಡೆಯಲು ಬಂದಿದ್ದ 2 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ವಿರುದ್ಧ ಮೂಡಬಿದ್ರೆ ಅಪರಾಧ ಕ್ರಮಾಂಕ 154/2025 ಕಲಂ 303(2) ಬಿ.ಎನ್.ಎಸ್. ಮತ್ತು 4, 12 ಗೋಹತ್ಯೆ ನಿಷೇಧ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.ಪೊಲೀಸ್ ನಿರೀಕ್ಷಕರುಮೂಡಬಿದ್ರೆ

- Advertisement -

Latest News

error: Content is protected !!