Tuesday, June 23, 2026
Homeಕರಾವಳಿಮಂಗಳೂರುಬಿಗ್ ಬಾಸ್ ಸ್ಫರ್ಧಿಗಳು ರೆಸಾರ್ಟ್ ಗೆ ಶಿಫ್ಟ್; ಇಂದು ಕೋರ್ಟ್ ಮೊರೆ ಹೋಗಲಿರುವ ಬಿಗ್ ಬಾಸ್...

ಬಿಗ್ ಬಾಸ್ ಸ್ಫರ್ಧಿಗಳು ರೆಸಾರ್ಟ್ ಗೆ ಶಿಫ್ಟ್; ಇಂದು ಕೋರ್ಟ್ ಮೊರೆ ಹೋಗಲಿರುವ ಬಿಗ್ ಬಾಸ್ ಮ್ಯಾನೇಜ್ಮೆಂಟ್

- Advertisement -
- Advertisement -

ರಾಮನಗರ: ಕನ್ನಡ ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋ ಸೀಝ್ ಆಗಿರುವ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮ್ಯಾನೇಜ್ ಮೆಂಟ್ ಇಂದು ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.

ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ರಿಯಾಲಿಟಿ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಎಲ್ಲಾ ಸ್ಪರ್ಧಾಳುಗಳನ್ನು ರಾಮನಗರ ತಾಲೂಕಿನ ಬಿಡದಿಯಲ್ಲಿರುವ ಖಾಸಗಿ ರೆಸಾರ್ಟ್ ಗೆ ಸ್ಥಳಾಂತರಿಸಲಾಗಿದೆ.

ಇಂದು ಕೋರ್ಟ್ ನಲ್ಲಿನ ತೀರ್ಮಾನದ ಬಳಿಕ ಬಿಗ್ ಬಾಸ್ ಮ್ಯಾನೇಜ್ಮೆಂಟ್ ತನ್ನ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಿಲ್ಲ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೋಟೀಸ್ ನೀಡಿದ್ದ ಮತ್ತು ಒಳಾಂಗಣದಲ್ಲಿ ರಿಯಾಲಿಟಿ ಶೋ ನಡೆಸಲು ಪೊಲೀಸ್ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕಾಗಿ ನಿನ್ನೆ ರಾಮನಗರ ತಹಶೀಲ್ದಾರ್ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗ ಮುದ್ರೆ ಹಾಕಿದ್ದರು.

- Advertisement -

Latest News

error: Content is protected !!