Tuesday, June 23, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಬೆಂಕಿ ಅನಾಹುತ ಸಂಭವಿಸಿದ ನೆರಿಯದ ಹರೀಶ್ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

ಬೆಳ್ತಂಗಡಿ: ಬೆಂಕಿ ಅನಾಹುತ ಸಂಭವಿಸಿದ ನೆರಿಯದ ಹರೀಶ್ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

- Advertisement -
- Advertisement -

ಬೆಳ್ತಂಗಡಿ: ನೆರಿಯ ಗ್ರಾಮದ ಹರೀಶ್ ವಿ. ಅವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಹಾನಿಗೊಂಡ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜ ಅವರ ಅಕ್ಟೋಬರ್ 7 ರಂದು ಮನೆಗೆ ಭೇಟಿ ನೀಡಿದರು.

ಈ ವೇಳೆ ತಾತ್ಕಾಲಿಕವಾಗಿ ವಾಸ್ತವ್ಯವಿರಲು ಮನೆಯ ವ್ಯವಸ್ಥೆಯನ್ನು ಮತ್ತು ಮುಂದಿನ ಮನೆ ನಿರ್ಮಾಣದ ಕುರಿತು ಸ್ಥಳೀಯ ಕಾರ್ಯಕರ್ತರೊಂದಿಗೆ ಚರ್ಚಿಸಿದರು. ಅಲ್ಲದೇ ವೈಯಕ್ತಿಕವಾಗಿ ಧನಸಹಾಯ ನೀಡಿ ಧೈರ್ಯ ತುಂಬಿದರು.

ಇದೇ ಸಂದರ್ಭದಲ್ಲಿ ವೈಯಕ್ತಿಕ ಧನಸಹಾಯವನ್ನು ನೀಡಿ ಧೈರ್ಯ ತುಂಬಿದರು.ಈ ಸಂದರ್ಭದಲ್ಲಿ ಬಿ‌‌.ಜೆ.ಪಿ ಮಹಾಶಕ್ತಿ ಕೇಂದ್ರ ಪ್ರಮುಖರಾದ ಬಾಬು ಗೌಡ ಪರ್ಪಳ, ಶಕ್ತಿ ಕೇಂದ್ರ ಪ್ರಮುಖರರಾದ ವಿಶ್ವನಾಥ ಅಣಿಯೂರು,ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಸಂತಿ, ಉಪಾಧ್ಯಕ್ಷರಾದ ಸಜಿತ, ಸದಸ್ಯರಾದ ಕುಶಲ, ವಿ.ಹಿಂ.ಪ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಆರ್,ಎಸ್ ಎಸ್ ಪ್ರಮುಖರಾದ ಶಿವಪ್ರಸಾದ್ ಸುರ್ಯ, ಸುದರ್ಶನ್ ಕನ್ಯಾಡಿ, ರಾಜೇಶ್ ತೋಟತ್ತಾಡಿ, ಅಕ್ಷಯ್ ಅಣಿಯೂರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Latest News

error: Content is protected !!