Thursday, July 18, 2024
Homeತಾಜಾ ಸುದ್ದಿಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮನೆಯ ಪಕ್ಕದವನಿಗೆ ಕೊರೋನಾ !

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮನೆಯ ಪಕ್ಕದವನಿಗೆ ಕೊರೋನಾ !

spot_img
- Advertisement -
- Advertisement -

ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನಿವಾಸ ಮಾತೋಶ್ರಿ ಬಳಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಡೀ ಏರಿಯಾವನ್ನ ನಿರ್ಬಂಧಿತ ಪ್ರದೇಶ ಅಂತ ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಘೋಷಿಸಿದೆ.

ಮಾತೋಶ್ರಿ ಬಳಿ ಇರುವ ಸರ್ಕಾರಿ ಗೆಸ್ಟ್ ಹೌಸ್ ಬಳಿ ಈ ವ್ಯಕ್ತಿ ಪತ್ತೆಯಾಗಿದ್ದ, ಆತನನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆಯೇ ಮಾತೋಶ್ರಿಗೆ ಸಾರ್ವಜನಿಕರ ಪ್ರವೇಶವನ್ನ ನಿರ್ಬಂಧಿಸಲಾಗಿತ್ತು. ಇದೀಗ ಬಿಎಂಸಿ, ಇಡೀ ಏರಿಯಾವನ್ನೇ ನಿರ್ಬಂಧಿತ ಪ್ರದೇಶ ಅಂತ ಘೋಷಿಸಿದೆ.

ಇದಲ್ಲದೆ, ಮಾತೋಶ್ರಿ ಬಳಿ ಟೀ ಮಾರುತ್ತಿದ್ದ ವ್ಯಕ್ತಿಯೊಬ್ಬರಿಗೂ ಕೊರೊನಾ ಸೋಂಕಿರುವ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನ ಪರೀಕ್ಷೆಗೆ ಒಳಪಡಿಸಲಾಗಿದೆ.

ಜೊತೆಗೆ ಅವರು ವಾಸವಿದ್ದ ಕಟ್ಟಡದಲ್ಲೇ ಇದ್ದ ಇನ್ನೂ ನಾಲ್ವರನ್ನ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಇದಲ್ಲದೆ, ಮಾತೋಶ್ರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲ ಸೆಕ್ಯೂರಿಟಿ ಸಿಬ್ಬಂದಿ ಕೂಡ ಇವರ ಬಳಿಯೇ ಟೀ ಕುಡಿಯುವುದಕ್ಕೆ ಹೋಗುತ್ತಿದ್ದರು. ಅವರನ್ನೂ ಸಹ ಗುರುತಿಸಿ ಮುಂಜಾಗ್ರತಾ ಕ್ರಮವಾಗಿ ಐಸೊಲೇಷನ್​ನಲ್ಲಿ ಇಡಲಾಗಿದೆ

- Advertisement -
spot_img

Latest News

error: Content is protected !!