- Advertisement -
- Advertisement -
ಲಾಕ್‍ಡೌನ್ ಉಲ್ಲಂಘಿಸಿದವರಿಗೆ ಪೊಲೀಸರು ಹೊಡೆಯುವ ಬದಲು ಅವರಿಗೆ ಲೂಸ್‍ಮೋಶನ್ ಮಾತ್ರೆ ನೀಡಬೇಕು ಎಂದು ಅಥಣಿ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.
‘ನನಗೆ ಒಂದು ವಾಟ್ಸಾಪ್ ಮೆಸೇಜ್ ಬಂದಿತ್ತು. ಅದರಲ್ಲಿ ಮಹಿಳೆಯೋರ್ವಳು ಹೇಳುತ್ತಿದ್ದಳು, ಪೊಲೀಸರು ಲಾಕ್‍ಡೌನ್ ಉಲ್ಲಂಘಿಸಿದವರನ್ನ ಹಿಡಿದು ಲೂಸ್‍ಮೋಶನ್ ಮಾತ್ರೆ ಕೊಟ್ಟರೆ ಅವರು ಮನೆಯಲ್ಲೂ ಇರುತ್ತಾರೆ. ಮತ್ತೆ ದಿನನಿತ್ಯ ಕೈಗಳನ್ನ ತೊಳೆದುಕೊಳ್ಳುತ್ತಾರೆ ಎಂಬುದಾಗಿತ್ತು ಎಂದು ಶಾಸಕ ಕುಮಟಳ್ಳಿ, ಅಥಣಿ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಾಸ್ಯ ಚಟಾಕೆ ಹಾರಿಸಿದ್ದಾರೆ.
ಲಾಕ್‍ಡೌನ್ ಉಲ್ಲಂಘಿಸದವರಿಗೆ ಲೂಸ್‍ಮೋಶನ್ ಮಾತ್ರೆ ನೀಡುವ ಮಹೇಶ್ ಕುಮಟಳ್ಳಿ ಅವರ ಹೊಸ ಐಡಿಯಾವನ್ನ ಪೊಲೀಸರು ಎಷ್ಟರ ಮಟ್ಟಿಗೆ ಸಿರಿಯಸ್ ಆಗಿ ತೆಗೆದುಕೊಳ್ಳುತ್ತಾರೆ ಅನ್ನೋದನ್ನ ಕಾಯ್ದು ನೋಡಬೇಕಿದೆ.
- Advertisement -