- Advertisement -
- Advertisement -
ಬಂಟ್ವಾಳ.ಎ-07: ದೇಶದಾದ್ಯಂತ ಕೊರೋನಾ ವೈರಸ್ ಲಾಕ್ ಡೌನ್ ನಿಮಿತ್ತ ಲಕ್ಷಾಂತರ ಬಡ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗುತ್ತಲೇ ಇದೆ. ಈ ಕಷ್ಟ ತಮ್ಮ ಆಸುಪಾಸಿನಲ್ಲಿ ಆಗಬಾರದೆಂಬ ದೃಷ್ಟಿಯಿಂದ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ರಾಮಕೃಷ್ಣ ಆಳ್ವಾ ಪೊನ್ನೋಡಿ ಇವರ ಮುಂದಾಳತ್ವದಲ್ಲಿ ದಾನಿಗಳಾದ ಮನೋಹರ್ ಶೆಟ್ಟಿ ಕೊಡಿಬೆಟ್ಟು, ಭಾಸ್ಕರ ಶೆಟ್ಟಿ ಪರಾರಿ ಗುತ್ತು ಮತ್ತು ರಾಜಾರಾಮ ಶೆಟ್ಟಿ ಪಲ್ಲಮಜಲು ಗುತ್ತು ಇವರ ಸಹಕಾರದೊಂದಿಗೆ ಆಯ್ದ 100 ಸಂತ್ರಸ್ತ ಕುಟುಂಬಗಳಿಗೆ ಒಂದು ಲಕ್ಷಕ್ಕೂ ಮಿಕ್ಕಿ ಮೊತ್ತದ ಅಕ್ಕಿ ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಾಯಿಸಲಾಯಿತು.
ಬಿ ಮೂಡಗ್ರಾಮ, ಪಲ್ಲಮಜಲು, ಕುಪ್ಪಿಲ, ಗೊಳಿನೆಲ, ತಲಪಾಡಿ ಹಾಗೂ ಗಾಣದಕೊಡಿ ಪರಾರಿ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಶಿಫಾರಸು ಮಾಡಿರುವ ಬಡ ಕುಟುಂಬಗಳಿಗೆ ಆಯಾ ಅಂಗನವಾಡಿ ಕೇಂದ್ರಗಳಲ್ಲಿ ಇಂದು ವಿತರಿಸಲಾಯಿತು.
- Advertisement -