- Advertisement -
- Advertisement -
ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಗ್ರಾಮ ಪಂಚಾಯತ್ ಮತ್ತು ಮತ್ತು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನ ಧರ್ಮಗುರುಗಳ ನೇತೃತ್ವದ ICYM ಮಡಂತ್ಯಾರು, SHADOW RIDERS ಮಡಂತ್ಯಾರು, ಕುಕ್ಕಳ ಗ್ರಾಮದ ಬೆರ್ಕಳ ಯುವ ಸಮುದಾಯದ ಸಹಕಾರದಿಂದ ಮಡಂತ್ಯಾರು ಮತ್ತು ಪುಂಜಾಲಕಟ್ಟೆ ಪೇಟೆಯಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಗೋಪಾಲಕೃಷ್ಣ ಕೆ, ಧರ್ಮಗುರುಗಳಾದ ಪಾ. ಬೇಸಿಲ್ ವಾಸ್, ಕ್ಯಾಥೊಲಿಕ್ ಸಭಾದ ಸದಸ್ಯರು, ಗ್ರಾ.ಪಂ. ಸದಸ್ಯರಾದ ಕಿಶೋರ್ ಶೆಟ್ಟಿ, ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ, ರಮೇಶ್ ಮೂಲ್ಯ. ರೋಟರಿ ಕ್ಲಬ್ ಸದಸ್ಯರು, ಮಹಿಷಮರ್ದಿನಿ ಯಕ್ಷಗಾನ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಪಿಡಿಒ ನಾಗೇಶ್ ಎಂ. ಕೋವಿ ಡ್ 19 ಜಾಗೃತಿ ಸಂದೇಶವನ್ನು ನೀಡಿದರು. ಗ್ರಾ. ಪಂ. ಸಿಬ್ಬಂದಿ ಉಮೇಶ್, ಕಾರ್ತಿಕ್ ಸಹಕರಿಸಿದರು.
- Advertisement -