ಸುಳ್ಯ: ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಹಾಗೂ ಸುಳ್ಯ ಬೆಳ್ಳಾರೆ ಘಟಕದ ವತಿಯಿಂದ ಬಡ ಯಕ್ಷಗಾನ ಕಲಾವಿದರಿಗೆ ದಿನನಿತ್ಯ ಆಹಾರ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಈ ಒಂದು ಕಾರ್ಯಕ್ರಮದಲ್ಲಿ ಬೆಳ್ಳಾರೆಯ ಹೊರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಂಜನೇಯರೆಡ್ಡಿ ಚಾಲನೆಯನ್ನು ನೀಡಿದರು.ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಗ್ರಾಪಂ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ನಾಗರಾಜ್ ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿಯಾದ ಧನಂಜಯ.ಕೆ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುನಿಲ್ ರೈ ಪುಡ್ಕಜೆ, ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆ ಗುತ್ತು, ಯಕ್ಷಧ್ರುವ ಪಟ್ಲ ಫೌಂಡೇಷನ್ ಸುಳ್ಯ ಬೆಳ್ಳಾರೆ ಘಟಕದ ಅಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ ಮತ್ತು ಇದರ ಸಂಚಾಲಕರಾದ ರಮೇಶ್ ರೈ ಅಗಲ್ಪಾಡಿ ಹಾಗೂ ಜೆಸಿ ಅಧ್ಯಕ್ಷರಾದ ವೀರನಾಥ,ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಆರಿಫ್, ನಾಗೇಶ್ ಕುಲಾಲ್ ,ಜೂನಿಯರ್ ಜೆಸಿಯ ಅಧ್ಯಕ್ಷರಾದ ಹರೀಶ್ ಯು.ಕೆ , ಚಂದ್ರಶೇಖರ ಪನ್ನೆ ,ಕಿರಣ್ ರೈ ಅಗಲ್ಪಾಡಿ ,ಜಗನ್ನಾಥ ರೈ, ಮಹೇಶ್. ಕೆ ,ತೇಜಸ್ವಿ ಉಮಿಕ್ಕಳ,ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .
ಈ ಸಂದರ್ಭದಲ್ಲಿ ಬಡ ಕಲಾವಿದರಿಗೆ ಅಕ್ಕಿ ಮತ್ತು ದಿನಸಿ ಸಾಮಗ್ರಿಗಳನ್ನು ವಿತರಿಸbಲಾಯಿತು ಈ ಕಾರ್ಯಕ್ರಮವನ್ನು ಯಕ್ಷಧ್ರುವ ಪಟ್ಲ ಫೌಂಡೇಷನ್ ಸುಳ್ಯ ಬೆಳ್ಳಾರೆ ಘಟಕದ ಕಾರ್ಯದರ್ಶಿಯಾದ ಪ್ರೀತಮ್ ರೈ ಬೆಳ್ಳಾರೆ ಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.