Friday, June 26, 2026
Homeಕರಾವಳಿದ.ಕ: ಜಿಲ್ಲೆಯಲ್ಲಿ ಇಂದು ಬಾಣಂತಿ ಸಹಿತ ಮೂವರನ್ನು ಬಲಿ ಪಡೆದ ಕೊರೊನಾ

ದ.ಕ: ಜಿಲ್ಲೆಯಲ್ಲಿ ಇಂದು ಬಾಣಂತಿ ಸಹಿತ ಮೂವರನ್ನು ಬಲಿ ಪಡೆದ ಕೊರೊನಾ

- Advertisement -
- Advertisement -

ಮಂಗಳೂರು: ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಇಂದು ಬೆಳಿಗ್ಗೆಯೇ ಮೂರು ಜೀವಗಳ ಬಲಿ ಪಡೆದಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾದಿಂದ ಮೃತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುತ್ತೂರು ಮೂಲದ 32 ವರ್ಷದ ಮಹಿಳೆ, ಉಳ್ಳಾಲ ನಿವಾಸಿಯಾಗಿದ್ದ 62 ವರ್ಷದ ವೃದ್ದೆ ಹಾಗೂ ಭಟ್ಕಳ ಮೂಲದ 60 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ.

ನಿನ್ನೆಯ ಸಂಜೆಯ ಹೆಲ್ತ್ ಬುಲೆಟಿನ್ ವರದಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 1359 ಪ್ರಕರಣ ದೃಢಪಟ್ಟಿದೆ. ಈ ಪೈಕಿ 683 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನು 650 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!