Thursday, June 4, 2026
Homeತಾಜಾ ಸುದ್ದಿಸಂಸದೆ ಸುಮಲತಾ ಅಂಬರೀಶ್ ಕೊರೋನಾ: ದೊಡ್ಡಣ್ಣರಿಗೂ ಎದುರಾಯ್ತು ಸೋಂಕಿನ ಭೀತಿ

ಸಂಸದೆ ಸುಮಲತಾ ಅಂಬರೀಶ್ ಕೊರೋನಾ: ದೊಡ್ಡಣ್ಣರಿಗೂ ಎದುರಾಯ್ತು ಸೋಂಕಿನ ಭೀತಿ

- Advertisement -
- Advertisement -

ಬೆಂಗಳೂರು: ನಟಿ, ಸಂಸದೆ ಸುಮಲತಾ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಈ ವಿಚಾರವನ್ನು ಅವರೇ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದರು. ಇದರ ಬೆನ್ನಲ್ಲೇ ಹಿರಿಯ ನಟ ದೊಡ್ಡಣ್ಣ ಅವರಿಗೂ ಸೋಂಕಿನ ಆತಂಕ ಉಂಟಾಗಿದೆ.

ಕಳೆದ ಗುರುವಾರವಷ್ಟೇ ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರವಾಗಿ ಸುಮಲತಾ ಅವರೊಂದಿಗೆ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ವಿಧಾನಸೌಧಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಸುಮಲತಾ ಅವರ ಸಂಪರ್ಕಕ್ಕೆ ಬಂದಿದ್ದ ಕಾರಣ ಸಿಎಂ ಯಡಿಯೂರಪ್ಪ, ಅಭಿಷೇಕ್ ಅಂಬರೀಶ್, ನಟ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್,​ ಹಾಗೂ ಕರ್ನಾಟಕ ಚನಲಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜೈರಾಜ್ ಅವರಿಗೂ ಸೋಂಕಿನ ಭೀತಿ ಉಂಟಾಗಿದೆ.

ಆರೋಗ್ಯ ಇಲಾಖೆ ಸಿಬ್ಬಂದಿ ದೊಡ್ಡಣ್ಣ ಅವರಿಗೂ ಹೋಂ ಕ್ವಾರಂಟೈನ್ ಗೆ ಒಳಪಡಿಸುವ ಸಾಧ್ಯತೆ ಇದೆ. ಬೆಂಗಳೂರು ಉತ್ತರ ತಾಲೂಕಿನ ಚನ್ನನಾಯಕನಪಾಳ್ಯದಲ್ಲಿರುವ ನಿವಾಸದಲ್ಲಿ ದೊಡ್ಡಣ್ಣ ಅವರನ್ನು ಕ್ವಾರಂಟೈನ್ ಮಾಡುವ ಸಾಧ್ಯತೆ ಇದೆ.

- Advertisement -

Latest News

error: Content is protected !!