Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ:ಜಾತಿನಿಂದನೆ ಪ್ರಕರಣದ ಆರೋಪಿಗೆ ಶಿಕ್ಷೆ ಪ್ರಕಟ

ಬೆಳ್ತಂಗಡಿ:ಜಾತಿನಿಂದನೆ ಪ್ರಕರಣದ ಆರೋಪಿಗೆ ಶಿಕ್ಷೆ ಪ್ರಕಟ

- Advertisement -
- Advertisement -

ಬೆಳ್ತಂಗಡಿ:ಜಾತಿನಿಂದನೆ ಪ್ರಕರಣದ ಆರೋಪಿಗೆ ಶಿಕ್ಷೆ ಪ್ರಕಟಿಸಿ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.ಆರೋಪಿ ಖಾಲಿದ್ @ಅಬ್ದುಲ್ ಖಾದರ್ ಶಿಕ್ಷೆಗೆ ಗುರಿಯಾಗಿರುವ ಆರೋಪಿ.

ವೇಣೂರು ಪೊಲೀಸ್‌ ಠಾಣಾ ಅ.ಕ್ರ 15/2021, ಕಲಂ-452,354(a),506 IPC ಮತ್ತು:ಕಲಂ;3(1)(w)(i),3(2)(Va) SC/ST Act ನೇ ಪ್ರಕರಣದಲ್ಲಿ, ಪ್ರಕರಣದ ತನಿಖಾಧಿಕಾರಿಗಳಾಗಿದ್ದ ವ್ಯಾಲೆಂಟೈನ್ ಡಿ’ಸೋಜಾ, ಪೊಲೀಸ್‌ ಉಪಾಧೀಕ್ಷಕರು, ಬಂಟ್ವಾಳ ಉಪವಿಭಾಗ ರವರು ಪ್ರಕರಣದ ತನಿಖೆ ನಡೆಸಿ, ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ, ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರಿನಲ್ಲಿ ಪ್ರಕರಣದ ವಿಚಾರಣೆ ನಡೆದು, ಮಾನ್ಯ ನ್ಯಾಯಾಧೀಶರಾದ ಜಗದೀಶ್‌ ವಿ ಎನ್‌ ರವರು ಪ್ರಕರಣದ ಆರೋಪಿ ಖಾಲಿದ್ @ಅಬ್ದುಲ್ ಖಾದರ್ ಎಂಬಾತನಿಗೆ ದಿನಾಂಕ 26-02-2026 ರಂದು ಕಲಂ-354-A of IPC and u/s. 3 (1) (w) (i) of SC/ST Act, 1989 ಕಾಯಿದೆಗೆ ಸಂಬಂಧಿಸಿದಂತೆ 1 ವರ್ಷ ಕಾರಾಗೃಹ ಹಾಗೂ 10,000 ರೂ ದಂಢ ವಿಧಿಸಿರುತ್ತಾರೆ.

ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜ್ಯೋತಿ ನಾಯ್ಕ್‌ ರವರು ಸಮರ್ಥವಾಗಿ ವಾದ ಮಂಡನೆ ಮಾಡಿರುತ್ತಾರೆ.

- Advertisement -

Latest News

error: Content is protected !!