Thursday, June 4, 2026
Homeತಾಜಾ ಸುದ್ದಿ35 ವರ್ಷ ಅನ್ಯೋನ್ಯ ದಾಂಪತ್ಯ ಅಂತ್ಯ: ಸಾವಿನಲ್ಲೂ ಒಂದಾದ ದಂಪತಿ

35 ವರ್ಷ ಅನ್ಯೋನ್ಯ ದಾಂಪತ್ಯ ಅಂತ್ಯ: ಸಾವಿನಲ್ಲೂ ಒಂದಾದ ದಂಪತಿ

- Advertisement -
- Advertisement -

ದಾವಣಗೆರೆ: ಅನಾರೋಗ್ಯದಿಂದ ಮೃತಪಟ್ಟ ಪತಿಯ ಸಾವಿನ ಸುದ್ದಿಯನ್ನ ಕೇಳಿದ ಪತ್ನಿಯೂ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಹೂವಿನಮಡು ಗ್ರಾಮದಲ್ಲಿ ನಡೆದಿದೆ. ಚಂದ್ರಪ್ಪ (60), ಶಾಂತಮ್ಮ(55) ಸಾವಿನಲ್ಲೂ ಒಂದಾದ ದಂಪತಿ.

ಹೂವಿನಮಡು ಗ್ರಾಮದ ಚಂದ್ರಪ್ಪ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಅವರು ತಮ್ಮ ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. 35 ವರ್ಷ ತಮ್ಮ ಜೊತೆ ಬಾಳಿದ ಸಂಗಾತಿ ನನ್ನನ್ನು ಬಿಟ್ಟು ಅಗಲಿದ್ದಾರೆ ಎಂಬ ವಿಷಯವನ್ನ ಕೇಳಿದ ಪತ್ನಿ ಹೃದಯಘಾತವಾಗಿದೆ.

ಹೃದಯಾಘಾತವಾಗುತ್ತಿದ್ದಂತೆ ತಾಯಿಯನ್ನ ಮಕ್ಕಳು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆ ತಲುಪುವ ವೇಳೆಗೆ ಶಾಂತಮ್ಮ ಕೂಡ ಸಾವನ್ನಪ್ಪಿದ್ದಾರೆ. ಆ ಮೂಲಕ ಪತಿ ಮತ್ತು ಪತ್ನಿ ತಮ್ಮ ಸಾವಿನಲ್ಲೂ ಒಂದಾಗಿದ್ದಾರೆ, ತಮ್ಮ ಮಕ್ಕಳು ಸೇರಿದಂತೆ ಅಪಾರವಾದ ಬಂಧು ಬಳಗವನ್ನ ಅಗಲಿದ್ದಾರೆ. ಒಂದೇ ದಿನ ಮನೆಯ ಹಿರಿಯರನ್ನ ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

- Advertisement -

Latest News

error: Content is protected !!