Sunday, October 18, 2026
Homeಕರಾವಳಿಉಡುಪಿಕಾರ್ಕಳ; ಬಾವಿಗೆ ಹಾರಿದ ಪತ್ನಿಯನ್ನು ರಕ್ಷಿಸಲು ಹೋಗಿ ಪತಿಯೂ ಸಾವು; ಅನಾಥವಾದ ಮಕ್ಕಳು

ಕಾರ್ಕಳ; ಬಾವಿಗೆ ಹಾರಿದ ಪತ್ನಿಯನ್ನು ರಕ್ಷಿಸಲು ಹೋಗಿ ಪತಿಯೂ ಸಾವು; ಅನಾಥವಾದ ಮಕ್ಕಳು

- Advertisement -
- Advertisement -

ಕಾರ್ಕಳ : ದಂಪತಿ ಮಧ್ಯೆ ಗಲಾಟೆ ಅತಿರೇಕಕ್ಕೆ ಹೋಗಿ ಪತ್ನಿ ಬಾವಿಗೆ ಹಾರಿ, ಆಕೆಯನ್ನು ರಕ್ಷಿಸಲು ಹೋದ ಪತಿಯು ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ  ಕಾರ್ಕಳ ತಾಲೂಕಿನ ನಲ್ಲೂರಿನಲ್ಲಿ ಘಟನೆ ನಡೆದಿದೆ. ಯಲ್ಲಾಪುರ ಮೂಲದ ಇಮ್ಯಾನುಲ್‌ ಸಿದ್ದಿ (40) ಹಾಗೂ ಯಶೋದಾ (32) ಎಂಬವರೇ ಸಾವಿಗೀಡಾದ ದಂಪತಿ.

ಇಂದು ಬೆಳಗ್ಗೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಯ ಮಧ್ಯೆ ಜಗಳವಾಗಿದೆ.  ಈ ವೇಳೆ ಯಶೋದಾ ತೋಟದಲ್ಲಿದ್ದ ಬಾವಿಗೆ ಹಾರಿದ್ದಾರೆ. ಯಶೋದಾರನ್ನು ರಕ್ಷಿಸಲು ತೆರಳಿದ್ದ ಪತಿ ಇಮ್ಯಾನುಲ್‌ ಕೂಡ ನೀರುಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಎರಡು ವರ್ಷಗಳಿಂದ ಇಮ್ಯಾನುಲ್‌, ಯಶೋದಾ ದಂಪತಿ ನಲ್ಲೂರಿನ ತೋಟವೊಂದರಲ್ಲಿ ಕೆಲಸಕ್ಕಿದ್ದರು. ದಂಪತಿ ಸಾವಿನಿಂದ ಇದೀಗ 10 ವರ್ಷದ ಬಾಲಕ ಹಾಗೂ 9 ವರ್ಷದ ಬಾಲಕಿ ಅನಾಥರಾಗಿದ್ದಾರೆ.

- Advertisement -

Latest News

error: Content is protected !!