Thursday, April 25, 2024
Homeತಾಜಾ ಸುದ್ದಿಇದು ಜಗತ್ತಿನ ಅತ್ಯಂತ ದುಬಾರಿ ಕುರಿ; ಇದರ ಬೆಲೆ ಕೇಳಿದ್ರೆ ನೀವು ಸುಸ್ತಾಗೋದು ಗ್ಯಾರಂಟಿ

ಇದು ಜಗತ್ತಿನ ಅತ್ಯಂತ ದುಬಾರಿ ಕುರಿ; ಇದರ ಬೆಲೆ ಕೇಳಿದ್ರೆ ನೀವು ಸುಸ್ತಾಗೋದು ಗ್ಯಾರಂಟಿ

spot_img
- Advertisement -
- Advertisement -

ನ್ಯೂಸ್ ಡೆಸ್ಕ್; ನೀವೆಲ್ಲಾ ಬಕ್ರೀದ್ ಸಮಯದಲ್ಲಿ ಲಕ್ಷಾಂತರ ರೂಪಾಯಿಗಳಿಗೆ ಕುರಿ ಮಾರಾಟವಾಗಿರೋದನ್ನು ನೋಡಿರ್ಬೋದು. ಆದ್ರೆ ಇಷ್ಟೊಂದು ದುಬಾರಿ ಬೆಲೆಯ ಕುರಿಯನ್ನು ನೀವು ನೋಡಿರಲು ಸಾಧ್ಯವೇ ಇಲ್ಲ. ಈ ಕುರಿಯ ಬೆಲೆ ಕೇಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ..

ಆಸ್ಟ್ರೇಲಿಯನ್ ವೈಟ್ ಸ್ಟಡ್ ಎಂಬ ತಳಿಯ ಕುರಿಯನ್ನು‌ ಈ ಎಲೈಟ್ ಆಸ್ಟ್ರೇಲಿಯನ್ ವೈಟ್ ಸಿಂಡಿಕೇಟ್ ಎರಡು ಕೋಟಿ ರೂಪಾಯಿಗಳನ್ನು ಕೊಟ್ಟು ಖರೀದಿ ಮಾಡಿದೆ. ನ್ಯೂ ಸೌತ್​ವೇಲ್ಸ್​ನಿಂದ ಬಂದಿರುವ ನಾಲ್ವರು ವ್ಯಕ್ತಿಗಳು ಇಷ್ಟು ಬೃಹತ್​ ಮೊತ್ತವನ್ನು ಕೊಟ್ಟು ಇದನ್ನು ಖರೀದಿ ಮಾಡಿದ್ದಾರೆ.

ಸೆಂಟ್ರಲ್ ನ್ಯೂ ಸೌತ್ ವೇಲ್ಸ್ ಮಾರಾಟದಲ್ಲಿ ಕುರಿಗಳನ್ನು ಮಾರಾಟ ಮಾಡಲಾಗುತ್ತದೆ. ಆಸ್ಟ್ರೇಲಿಯನ್ ವೈಟ್ ಸ್ಟಡ್ ಅನಿಮಲ್ ಈ ಹಿಂದೆ ವಿಶ್ವದ ಅತ್ಯಂತ ದುಬಾರಿ ಕುರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಳೆದ ವರ್ಷ ಒಂದು ಕುರಿ 1.35 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಈಗ ಈ ಕುರಿ ಆ ದಾಖಲೆ ಮುರಿಯುವ ಜತೆಗೆ ವಿಶ್ವ ದಾಖಲೆ ಬರೆದಿದೆ.

ಆಸ್ಟ್ರೇಲಿಯನ್ ವೈಟ್ ಶೀಪ್ ಕುರಿಯ ತಳಿ ತುಂಬಾ ವಿಶೇಷ ತಳಿಯಾಗಿದೆ , ಇದಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಈ ತಳಿಯ ಕುರಿಗಳಲ್ಲಿ ತುಪ್ಪಳವು (ಉಣ್ಣೆ) ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ. ಕಳೆದ ಕೆಲ ವರ್ಷಗಳಿಂದ, ಕುರಿಗಳಿಂದ ಉಣ್ಣೆ ತೆಗೆಯುವ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಉಣ್ಣೆ ತೆಗೆಯುವ ಪ್ರಕ್ರಿಯೆಯು ತುಂಬಾ ದುಬಾರಿಯಾಗಿರುವ ಕಾರಣ ಅದಕ್ಕೆ ಬೆಲೆ ಇಲ್ಲ. ಆದರೆ ಈ ತಳಿಯ ಕುರಿಗಳಲ್ಲಿ ಉಣ್ಣೆ ಕಡಿಮೆ ಇರುವ ಕಾರಣ, ಮಾಂಸಕ್ಕಾಗಿ ಬಳಸಲಾಗುತ್ತದೆ.ಮಾಂಸವು ಕೂಡ ಅಷ್ಟೇ ರುಚಿಕರವಾಗುತ್ತದೆ ಎನ್ನಲಾಗುತ್ತಿದೆ.

- Advertisement -
spot_img

Latest News

error: Content is protected !!