Wednesday, June 24, 2026
Homeತಾಜಾ ಸುದ್ದಿಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಬೆಂಗಳೂರಿನಲ್ಲಿ ಶಾಸಕ‌ ಡಾ. ವೈ. ಭರತ್ ಶೆಟ್ಟಿ...

ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಬೆಂಗಳೂರಿನಲ್ಲಿ ಶಾಸಕ‌ ಡಾ. ವೈ. ಭರತ್ ಶೆಟ್ಟಿ ಹೇಳಿಕೆ

- Advertisement -
- Advertisement -

ಬೆಂಗಳೂರು; ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಬೆಂಗಳೂರಿನಲ್ಲಿ ಶಾಸಕ‌ ಡಾ. ವೈ. ಭರತ್ ಶೆಟ್ಟಿ ಹೇಳಿದ್ದಾರೆ.

ಬಾಗಲಕೋಟೆ ಶಿವಾಜಿ ಮೆರವಣಿಗೆ ಗಲಾಟೆ ವಿಚಾರದ ಬಗ್ಗೆ ಮಾತನಾಡಿದ ಅವರು ಕರ್ನಾಟಕದಲ್ಲಿ ಇದು ಮೊದಲ ಬಾರಿ ಅಲ್ಲ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಆಗುತ್ತಲೇ ಇದೆ. ಸರ್ಕಾರ ಇಂತಹ ಶಕ್ತಿಗಳಿಗೆ ಕುಮ್ಮಕ್ಕು ಕೊಡುತ್ತಲೇ ಇದೆ. ಔರಂಗಜೇಬನ ಸಂತತಿಗಳು ಇನ್ನೂ ಜೀವಂತ ಇದ್ದಾರೆ. ಆ ಸಂತತಿ ನಮ್ಮ ಸರ್ಕಾರ ಇದೆ ಎಂದು ಕಲ್ಲು ತೂರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಯಾಕೆ ಹಿಂದೂಗಳ ಮೆರವಣಿಗೆ ಮೇಲೆ ಮಾತ್ರ ಕಲ್ಲು ತೂರಾಟ ಆಗುತ್ತಿದೆ?. ಮುಸಲ್ಮಾನರ ಮೆರವಣಿಗೆ ಮೇಲೆ ಯಾಕೆ ಕಲ್ಲು ತೂರಾಟ ಆಗಲ್ಲ?.ಹಿಂದೂಗಳು ಟಾರ್ಗೆಟ್ ಆಗಿದ್ದಾರಾ ಎಂಬ ಆತಂಕ ಹಿಂದೂಗಳಲ್ಲಿ ಶುರು ಆಗಿದೆ ಎಂದಿದ್ದಾರೆ.

ರಾಜ್ಯದ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಸಮಸ್ಯೆ ವಿಚಾರದ ಬಗ್ಗೆ ಮಾತನಾಡಿದ ಅವರು ಆಸ್ಪತ್ರೆ ಮಾತ್ರ ಅಲ್ಲ ಎಲ್ಲಾ ವಿಚಾರಗಳಲ್ಲಿ ಕೂಡಾ ಫೈಲ್ಯೂರ್ ಆಗಿದೆ. ಈ ರೀತಿ ಹೆಲ್ತ್ ಸೆಕ್ಟರ್ ಫೈಲ್ಯೂರ್ ಆಗಿರುವುದು ಯಾವ ರಾಜ್ಯದಲ್ಲೂ ನೋಡಲು ಸಾಧ್ಯವಿಲ್ಲ. ಕಳಪೆ ಗುಣಮಟ್ಟದ ಔಷಧಿಗಳನ್ನು ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ಕಮಿಷನ್ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.ಹಿಂದೆ ಅಬಕಾರಿ ಸಚಿವರು ಹೇಳಿದ್ದರು, ಈಗ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸಿಎಂ, ಅವರ ಕುಟುಂಬದವರು, ಅವರಿಗೆ ಬಕೆಟ್ ಹಿಡಿಯುವುವರು ಎಲ್ಲರು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. 136 ಸಂಖ್ಯಾಬಲ ಇದೆ ಎಂದು ಆನೆ ನಡೆದದ್ದೇ ದಾರಿ ಎಂದು ಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.ಉಚಿತ ಯೋಜನೆಗಳ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ ಬಗ್ಗೆ ಚಿಂತನೆ ಆಗಬೇಕಿದೆ. ಅದರ ಬಗ್ಗೆ ಎಲ್ಲಾ ಪಕ್ಷಗಳಲ್ಲೂ ಚರ್ಚೆ ಆಗಬೇಕಿದೆ ಎಂದಿದ್ದಾರೆ.

- Advertisement -

Latest News

error: Content is protected !!