Wednesday, April 24, 2024
Homeತಾಜಾ ಸುದ್ದಿಕೊರೊನಾ ವೈರಸ್‌ ತಗುಲಿದ ಮೊದಲ ರೋಗಿ ಯಾರು ?

ಕೊರೊನಾ ವೈರಸ್‌ ತಗುಲಿದ ಮೊದಲ ರೋಗಿ ಯಾರು ?

spot_img
- Advertisement -
- Advertisement -

ಕೊರೊನಾ ಸೋಂಕು ತಗುಲಿದ ಜಗತ್ತಿನ ಮೊದಲ ರೋಗಿ ಹೆಸರು ವೀ ಗುಕ್ಸಿಯನ್‌. ಚೀನಾದ ವುಹಾನ್‌ ಸಿಟಿಯ ಸೀಫುಡ್‌ ಮಾರುಕಟ್ಟೆಯಲ್ಲಿ ಸೀಗಡಿ ಮಾರಾಟ ಮಾಡುವ, 57 ವರ್ಷ ವಯಸ್ಸಿನ ಹೆಂಗಸು. ಹೌದು, ಕೊರೊನಾ ಸೋಂಕು ಲಕ್ಷಣಗಳು ಮೊದಲು ಕಾಣಿಸಿಕೊಂಡಿದ್ದು ಇದೇ ಮಹಿಳೆಯಲ್ಲಿ. ಇದೀಗ, ಆಕೆಯ ಸಂಪರ್ಕಕ್ಕೆ ಬಂದವರಿಂದ ಹಿಡಿದು ಆರಂಭವಾಗಿ ಇದೀಗ ಜಗತ್ತಿನಾದ್ಯಂತ ಈ ಕೊರೊನಾ ವೈರಸ್‌ಗೆ 30 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ, 6.5 ಲಕ್ಷದಷ್ಟು ಜನರು ಸೋಂಕಿತರಾಗಿದ್ದಾರೆ! ಎಲ್ಲಕ್ಕಿಂತ ಹೆಚ್ಚಾಗಿ ಇದಕ್ಕೆ ನಿರ್ದಿಷ್ಟವಾದ ಔಷಧ ಇಲ್ಲ. ಇಡೀ ಜಗತ್ತೇ ಸ್ತಬ್ಧವಾಗಿದೆ, ವಿಶ್ವದ ಆರ್ಥಿಕತೆ ಅದೋಗತಿಗೆ ಹೋಗುತ್ತಿದೆ.

ಸೀಫುಡ್‌ ಮಾರುಕಟ್ಟೆಯ ಬೀದಿಯಲ್ಲಿ ಸೀಗಡಿಗಳನ್ನು ಮಾರಾಟ ಮಾಡುತ್ತಿದ್ದಾಗಲೇ ಡಿಸೆಂಬರ್‌ 10ರಂದು ಆಕೆಗೆ ಶೀತವಾಗುತ್ತದೆ. ಜೊತಗೆ ಆಕೆ, ಸಾಮಾನ್ಯ ಜ್ವರ ಇರಬಹುದು ಎಂದು ಭಾವಿಸುತ್ತಾಳೆ. ಕೂಡಲೇ ಆಕೆ, ಸ್ಥಳೀಯ ಕ್ಲಿನಿಕ್‌ಗೆ ಹೋಗುತ್ತಾಳೆ. ಅಲ್ಲಿನ ವೈದ್ಯರು ಆಕೆಗೆ ಇಂಜೆಕ್ಷನ್‌ ನೀಡುತ್ತಾರೆ. ಇಷ್ಟಾಗಿಯೂ ವೀಗೆ ತಾನು ಅಶಕ್ತಗಳಾಗುತ್ತಿದ್ದೇನೆ ಎನಿಸಿತೊಡಗುತ್ತದೆ. ಆ ಬಳಿಕ ಆಕೆ, ವುಹಾನ್‌ ಎಲಿವೆಂಥ್‌ ಹಾಸ್ಪಿಟಲ್‌ಗೆ ಭೇಟಿ ನೀಡುತ್ತಾಳೆ. ಅಲ್ಲಿಯೂ ಆರೋಗ್ಯ ಪರಿಸ್ಥಿತಿ ಸುಧಾರಿಸುವುದಿಲ್ಲ. ವುಹಾನ್‌ ಸಿಟಿಯ ಅತಿದೊಡ್ಡ ಆಸ್ಪತ್ರೆ ಎನಿಸಿಕೊಂಡಿರುವ ವುಹಾನ್‌ ಯೂನಿಯನ್‌ ಹಾಸ್ಪಿಟಲ್‌ಗೆ ಡಿಸೆಂಬರ್‌ 16ರಂದು ದಾಖಲಾಗುತ್ತಾಳೆ. ಅಲ್ಲಿಂದ ನಿಜವಾದ ಕತೆ ಶುರುವಾಗುತ್ತದೆ.

ಝೀರೋ ಪೇಷೆಂಟ್‌ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಅಸಲಿಗೆ, ಜನವರಿಯಲ್ಲೇ ವೀ ಗುಕ್ಸಿಯನ್‌ ಚೇತರಿಸಿಕೊಂಡಿದ್ದರು. ಆಕೆಯ ಪ್ರಕಾರ, ಈ ವೈರಸ್‌ ಹರಡಿದ ಮೂಲವೇ ಬೇರೆ ಇದೆ. ಗುಕ್ಸಿಯನ್‌ ಹೇಳುವ ಪ್ರಕಾರ, ಆಕೆ ಹುವಾನಾನ್‌ ಮಾರುಕಟ್ಟೆಯಲ್ಲಿ ಮಾಂಸ ಮಾರಾಟಗಾರೊಬ್ಬರ ಜತೆ ಟಾಯ್ಲೆಟ್‌ ಹಂಚಿಕೊಂಡಿದ್ದರಿಂದಲೇ ಈ ಕೋವಿಡ್‌ 19 ಬಂದಿದೆಯಂತೆ. ಆದರೆ, ಈ ಬಗ್ಗೆ ಇನ್ನೂ ನಿಖರವಾದ ಮಾಹಿತಿಗಳು ಲಭ್ಯವಾಗಿಲ್ಲ. ಅದು ಹೇಗೆ ಉತ್ಪತ್ತಿಯಾಯಿತು ಎಂಬುದರ ಬಗ್ಗೆ ಗೊತ್ತಿಲ್ಲ.

- Advertisement -
spot_img

Latest News

error: Content is protected !!