ದಾವಣಗೆರೆ: ಮಾರಕ ಕೊರೊನಾ ಸೋಂಕು ಹರಡುವವರು ದೇಶದ್ರೋಹಿಗಳು, ಅವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ.
ಈ ಹಿಂದೆ ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಆದರೆ, ನಿಜಾಮುದ್ದೀನ್ ಗೆ ಹೋಗಿ ಬಂದವರಿಂದ ಸೋಂಕು ವ್ಯಾಪಕವಾಗಿ ಹೆಚ್ಚಾಗಿದೆ. ನಿಜಾಮುದ್ದೀನ್ ನಿಂದ ವಾಪಾಸ್ ಆದವರು ಸ್ವಯಂಪ್ರೇರಿತವಾಗಿ ಆಸ್ಪತ್ರೆಗೆ ಹೋಗಿ ತಪಾಸಣೆಗೆ ಒಳಪಟ್ಟಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಕೊರೊಡನಾ ಹರಡುವವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ರೇಣುಕಾಚಾರ್ಯ ಕಿಡಿಕಾರಿದರು.
ಇನ್ನು ನಿಜಾಮುದ್ದೀನ್ ಪ್ರಕರಣ ಕಂಟಕದಂತೆ ಆಗಿದೆ. ತಪಾಸಣೆಗೆ ಒಳಪಡದೇ ಮನೆಯಲ್ಲಿ ಅವಿತುಕೊಳ್ಳುವ ಮೂಲಕ ಇತರರಿಗೆ ಮಾರಕ ಸೋಂಕು ಹರಡುವುದು ಒಂದು ರೀತಿ ಭಯೋತ್ಪಾದನೆ, ದೇಶದ್ರೋಹವಾಗಿದೆ. ತಾವು ಸತ್ತರೂ ಪರವಾಗಿಲ್ಲ, ಬೇರೆಯವರು ಸಾಯಬೇಕು ಎನ್ನುವುದು ಎಂತಹ ನ್ಯಾಯ ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಯಾರು ವೈರಸ್ ಹರುಡುತ್ತಿದ್ದಾರೋ ಅದು ಪರೋಕ್ಷವಾಗಿ ಭಯೋತ್ಪಾದನೆ ನಡೆಸಿದಂತಾಗಿದೆ. ಇವರಿಗೆಲ್ಲ ದೇಶಕ್ಕಿಂತ ಧರ್ಮ, ಪ್ರಾರ್ಥನೆಯೇ ಮುಖ್ಯವಾಯಿತಾ ಎಂದು ಪ್ರಶ್ನಿಸಿದರು.