Thursday, May 16, 2024
Homeತಾಜಾ ಸುದ್ದಿಕೊರೊನಾ ದೃಢಪಟ್ಟ ಕಾರಣದಿಂದ ಮನನೊಂದು ಕೆಎಸ್​ಆರ್​ಪಿ ಕಾನ್ಸ್ ಟೇಬಲ್ ಆತ್ಮಹತ್ಯೆ

ಕೊರೊನಾ ದೃಢಪಟ್ಟ ಕಾರಣದಿಂದ ಮನನೊಂದು ಕೆಎಸ್​ಆರ್​ಪಿ ಕಾನ್ಸ್ ಟೇಬಲ್ ಆತ್ಮಹತ್ಯೆ

spot_img
- Advertisement -
- Advertisement -

ಬೆಂಗಳೂರು: ಕೊರೋನಾ ವೈರಸ್​​ಗೆ ಹೆದರಿ ಕೆಎಸ್​ಆರ್​​ಪಿ ಕಾನ್ಸ್ ಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಪೊಲೀಸ್​ ಹೆಡ್​​ ಕಾನ್​ಸ್ಟೇಬಲ್​​ಗೆ ಕೊರೋನಾ ಪಾಸಿಟಿವ್​ ದೃಢಪಟ್ಟಿತ್ತು. ಈ ಹಿನ್ನೆಲೆ ಆತನನ್ನು ಕೆಎಸ್​ಆರ್​​ಪಿ ಬಸ್​​ನಲ್ಲಿಯೇ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಬಸ್​ನಲ್ಲೇ ಪೊಲೀಸ್ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

50 ವರ್ಷದ ಕೆಎಸ್ ಆರ್ ಪಿ ಹೆಡ್ ಕಾನ್ಸ್ ಸ್ಟೇಬಲ್​ಗೆ ನಿನ್ನೆ ಸಂಜೆಯಷ್ಟೇ ಪಾಸಿಟಿವ್ ಬಂದಿತ್ತು. ಹೀಗಾಗಿ ನಿನ್ನೆ ರಾತ್ರಿ ಕೆ ಎಸ್ ಆರ್ ಪಿ ಸಿಬ್ಬಂದಿಯನ್ನು ಕೋರಮಂಗಲದಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ವ್ಯಾನ್​ನಲ್ಲಿ ಹಿಂದೆ ಕೊರೋನಾ ಪಾಸಿಟಿವ್ ಬಂದಿದ್ದ ಸಿಬ್ಬಂದಿ ಕುಳಿತಿದ್ದರೆ, ಒರ್ವ ಸಿಬ್ಬಂದಿ ವ್ಯಾನ್ ಡ್ರೈವ್ ಮಾಡುತ್ತಿದ್ದರು.
ಬಸ್​​ನಲ್ಲಿ ಬೇರೆ ಯಾರೂ ಸಹ ಇರಲಿಲ್ಲ. ಹೀಗಾಗಿ ಕೆಎಸ್​ಆರ್​ಪಿ ಸಿಬ್ಬಂದಿ ತಾನು ಉಟ್ಟಿದ್ದ ಪಂಚೆಯಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವ್ಯಾನ್ ಹಿಂಬದಿ ಕೂತರೆ ಯಾರಿಗೂ ಸಹ ಗೊತ್ತಾಗುವುದಿಲ್ಲ. ವ್ಯಾನ್ ವಿಕ್ಟೋರಿಯಾ ಆಸ್ಪತ್ರೆ ಬಳಿ ಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ರಾತ್ರಿ ಸುಮಾರು10 ಗಂಟೆ ವೇಳೆಗೆ ಈ ಘಟನೆ ನಡೆದಿದೆ.

- Advertisement -
spot_img

Latest News

error: Content is protected !!