Monday, May 20, 2024
Homeಕರಾವಳಿಶಿಶಿಲ ದೇವಸ್ಥಾನದ ಮೀನುಗಳಿಗೆ ಕನ್ನ ಹಾಕಿದ ಅರಸಿನಮಕ್ಕಿ ಮಸೀದಿ ಧರ್ಮಗುರು: ಬಿತ್ತು ನೋಡಿ ಊರಿನವರಿಂದ ಧರ್ಮದೇಟು

ಶಿಶಿಲ ದೇವಸ್ಥಾನದ ಮೀನುಗಳಿಗೆ ಕನ್ನ ಹಾಕಿದ ಅರಸಿನಮಕ್ಕಿ ಮಸೀದಿ ಧರ್ಮಗುರು: ಬಿತ್ತು ನೋಡಿ ಊರಿನವರಿಂದ ಧರ್ಮದೇಟು

spot_img
- Advertisement -
- Advertisement -

ಶಿಶಿಲ: ದ.ಕ ಜಿಲ್ಲೆಯ ಪ್ರಸಿದ್ಧ ಮತ್ಸ್ಯ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಶಿಶಿಲದ ಶಿಶಿಲೇಶ್ವರನ ಸನ್ನಿಧಿಯ ಕಪಿಲಾ ನದಿಯ ಮತ್ಸ್ಯ ಸಂಕುಲಕ್ಕೆ ಅರಸಿನಮಕ್ಕಿ ಮಸೀದಿ ಧರ್ಮಗುರು ಸೇರಿ 7 ಮಂದಿ ನಿನ್ನೆ ರಾತ್ರಿ ಕನ್ನ ಹಾಕಿದ ಘಟನೆ ನಡೆದಿದೆ.

ಶ್ರೀ ಶಿಶಿಲೇಶ್ವರ ದೇವಾಲಯದ ದೇವರ ಕೆರೆಯಲ್ಲಿ ಮೀನುಗಳನ್ನು ರಾತ್ರಿ ವೇಳೆ ಕದ್ದು ಕೊಂಡೊಯ್ಯಲಾಗುತ್ತಿತ್ತು. ಈ ಬಗ್ಗೆ ಸ್ಥಳೀಯ ಹಿಂದೂ ಜಾಗರಣ ವೇದಿಕೆ ಸಂಘಟನೆ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಲು ಕಾದು ಕುಳಿತಿತ್ತು. ನಿನ್ನೆಯೂ ಕಳ್ಳರು ಮೀನು ಕಳ್ಳತನಕ್ಕೆ ಬಂದಾಗ ಹಿಡಿದು ಥಳಿಸಿದ್ದಾರೆ. ಅರಸಿನಮಕ್ಕಿ ಮಸೀದಿಯ ಧರ್ಮಗುರು ಸಹಿತ 7 ಮಂದಿ ಸೆರೆಸಿಕ್ಕಿದ್ದು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

ರಾಜ್ಯಸರ್ಕಾರದ ಆದೇಶದಂತೆ ಶ್ರೀ ಕ್ಷೇತ್ರದಲ್ಲಿ ಹರಿಯುವ ನದಿಯ ಮೇಲೆ ಮತ್ತು ಕೆಳಗೆ 2 ಕಿ.ಮೀ ಯಾವುದೇ ರೀತಿಯ ಮೀನುಗಾರಿಕೆಗೆ ಅವಕಾಶವಿರುವುದಿಲ್ಲ.

ಆರೋಗ್ಯ ಸಂಬಂಧಿತವಾಗಿ ವಿಶೇಷವಾಗಿ ಶಿಶಿಲದ ಈ ಮತ್ಸ್ಯ ಸಂಕುಲವು ಹರಕೆಯನ್ನು ಪಡೆಯುವ ಪ್ರಸಿದ್ಧಿಯನ್ನು ಹೊಂದಿರುವ ಈ ದೇವಸ್ಥಾನಕ್ಕೆ ದೇಶ ವಿದೇಶಗಳಲ್ಲಿ ಅಪಾರ ಭಕ್ತರು ಹೊಂದಿದ್ದಾರೆ.

- Advertisement -
spot_img

Latest News

error: Content is protected !!