Friday, June 5, 2026
Homeತಾಜಾ ಸುದ್ದಿಮುಂಬೈ: ಕುರ್ಲಾದ ಗುಜರಿ ಗೋಡೌನ್ ನಲ್ಲಿ ಭೀಕರ ಅಗ್ನಿ ದುರಂತ, 5 ಅಂಗಡಿಗಳು ಬೆಂಕಿಗೆ ಆಹುತಿ

ಮುಂಬೈ: ಕುರ್ಲಾದ ಗುಜರಿ ಗೋಡೌನ್ ನಲ್ಲಿ ಭೀಕರ ಅಗ್ನಿ ದುರಂತ, 5 ಅಂಗಡಿಗಳು ಬೆಂಕಿಗೆ ಆಹುತಿ

- Advertisement -
- Advertisement -

ಮುಂಬೈ: ಮಹಾನಗರಿಯಲ್ಲಿ ಇಂದು ಮುಂಜಾನೆ ಗುಜರಿ ಅಂಗಡಿಯೊಂದರ ಗೋಡೌನ್ ನಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಇಲ್ಲಿನ ಮನ್ಕುರ್ದ್-ಗಾಟ್ಕೋಪರ್ ಲಿಂಕ್ ರಸ್ತೆ ಬಳಿಯ ಮಂಡಲ ಪ್ರದೇಶದಲ್ಲಿರುವ ಕುರ್ಲಾ ಸ್ರ್ಕ್ಯಾಪ್ ಗೋಡೌನ್ ನಲ್ಲಿ ಏಕಾಏಕಿ ಇಂದು ಅಗ್ನಿ ಅನಾಹುತ ಸಂಭವಿಸಿದೆ. ಸುಮಾರು 15 ಸಾವಿರ ಚದರ ಅಡಿ ಸಮೀಪದ ಪ್ರದೇಶದಲ್ಲಿ ಸುಮಾರು ಐದು ಸ್ಕ್ಯ್ರಾಪ್ ಗೋಡೌನ್ ನ್ನು ನಿರ್ಮಾಣ ಮಾಡಲಾಗಿತ್ತು. ಈ ಸ್ಥಳದಲ್ಲಿ ಗುಜರಿ ವಸ್ತುಗಳು ಹಾಗೂ ನಿರುಪಯಕ್ತ ಆಯಿಲ್ ಡ್ರಮ್ ಗಳನ್ನು ಅಪಾರ ಪ್ರಮಾಣದಲ್ಲಿ ಶೇಖರಿಸಿಟ್ಟಿದ್ದು, ಸ್ಥಳದಲ್ಲಿ ಏಕಾಏಕಿ ಬೆಂಕಿಯ ಕಿಡಿ ಹೊತ್ತುಕೊಂಡಿದೆ.

ಕ್ಷಣಮಾತ್ರದಲ್ಲಿ ಅಕ್ಕಪಕ್ಕದ ಗೋಡೌನ್ ಗಳಿಗೂ ಬೆಂಕಿ ವ್ಯಾಪಕವಾಗಿ ಹರಡಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ಧಾವಿಸಿದ್ದು, ಬೆಂಕಿ ನಂದಿಸಲು ಹರಸಾಹಸವನ್ನೇ ನಡೆಸಬೇಕಾಯಿತು.

- Advertisement -

Latest News

error: Content is protected !!