Friday, June 5, 2026
Homeಉದ್ಯಮಸತತ 17ನೇ ಬಾರಿಗೆ ಏರಿಕೆಯಾದ ಪೆಟ್ರೋಲ್ ಮತ್ತು ಡಿಸೇಲ್ ದರ

ಸತತ 17ನೇ ಬಾರಿಗೆ ಏರಿಕೆಯಾದ ಪೆಟ್ರೋಲ್ ಮತ್ತು ಡಿಸೇಲ್ ದರ

- Advertisement -
- Advertisement -

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಳವು ಸತತ 17ನೇ ದಿನವೂ ಮುಂದುವರೆದಿದ್ದು, ಮಂಗಳವಾರ ಕ್ರಮವಾಗಿ 20 ಪೈಸೆ ಮತ್ತು 55 ಪೈಸೆ ಏರಿಕೆಯಾಗಿದೆ.

ನಿರಂತರ ಹೆಚ್ಚಳದಿಂದ ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ಈಗ ₹10.01ರಷ್ಟು ಮತ್ತು ಪೆಟ್ರೋಲ್‌ ಬೆಲೆ ₹8.50ರಷ್ಟು ಹೆಚ್ಚಳವಾಗಿದೆ. ಸದ್ಯ ಬೆಂಗಳೂರಿನಲ್ಲಿ ಡೀಸೆಲ್‌ ಬೆಲೆ ₹75.59 ಮತ್ತು ಪೆಟ್ರೋಲ್‌ ಬೆಲೆ ₹82.32 ಕ್ಕೆ ತಲುಪಿದೆ.

ದೆಹಲಿಯಲ್ಲಿ ಡೀಸೆಲ್‌ ದರ ₹79.40 ಮತ್ತು ಪೆಟ್ರೋಲ್‌ ದರ ₹79.76ಕ್ಕೆ ಏರಿಕೆಯಾಗಿದೆ. ಇತ್ತ ಮುಂಬೈನಲ್ಲಿ ಡೀಸೆಲ್‌ ದರ ₹77.24 ಮತ್ತು ಪೆಟ್ರೋಲ್‌ ದರ ₹86.36ಕ್ಕೆ ಹೆಚ್ಚಳವಾಗಿದೆ.

ಜೈಪುರದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 87 ರೂ. ಮತ್ತು ಡೀಸೆಲ್ ಬೆಲೆ 80.36 ರೂ. ಏರಿಕೆಯಾಗಿದೆ. ಮಾತ್ರವಲ್ಲದೆ ಡೀಸೆಲ್ ದರ ಲೀಟರ್ ಗೆ 80 ರೂ. ಗಳನ್ನು ಮುಟ್ಟಿದ ಏಕೈಕ ನಗರ ಇದು.

ಇಂಧನ ದರ ಏರಿಕೆಯಿಂದ ಸರಕು ಸಾಗಾಣಿಕೆ ವೆಚ್ಚ ಹೆಚ್ಚಳವಾಗಿ ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

- Advertisement -

Latest News

error: Content is protected !!