Thursday, June 4, 2026
Homeಕರಾವಳಿಮನೆ ಮನೆಗೆ ತೆರಳಿ ಮೀನು ಮಾರುವ ಮಂಗಳೂರಿನ ವ್ಯಾಪಾರಿಗೆ ಕೊರೊನ ಸೋಂಕು ದೃಢ

ಮನೆ ಮನೆಗೆ ತೆರಳಿ ಮೀನು ಮಾರುವ ಮಂಗಳೂರಿನ ವ್ಯಾಪಾರಿಗೆ ಕೊರೊನ ಸೋಂಕು ದೃಢ

- Advertisement -
- Advertisement -

ಮಂಗಳೂರು : ಜಿಲ್ಲೆಯಲ್ಲಿ ಕಿಲ್ಲರ್ ಕೊರೊನ ಅಟ್ಟಹಾಸ ಮುಂದುವರೆದಿದ್ದು ,ಇದೀಗ ಮನೆಮನೆಗೆ ತೆರಳಿ ಮೀನು ವ್ಯಾಪಾರ ಮಾಡುತ್ತಿದ್ದ ಮಂಗಳೂರಿನ ಎಕ್ಕೂರು ನಿವಾಸಿಗೆ ಕೊರೊನ ಸೋಂಕು ವಕ್ಕರಿಸಿರುವುದು ಪರೀಕ್ಷೆಯಲ್ಲಿ ದೃಢವಾಗಿದೆ.

ಮಂಗಳೂರು ಬಂದರಿನ ಮೀನು ವ್ಯಾಪಾರದ ಸ್ಥಳಕ್ಕೆ ತೆರಳಿ, ಅಲ್ಲಿಂದ ಮೀನು ತಂದು, ಮನೆಮನೆಗೆ ಮೀನು ಮಾರಾಟ ಮಾಡುತ್ತಿದ್ದ ,ಎಕ್ಕೂರಿನ 27 ವರ್ಷದ ಯುವಕ ಶೀತದ ಸಮಸ್ಯೆಯಿಂದಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಸ್ವಯಂ ಪರೀಕ್ಷೆಗೊಳಪಟ್ಟಿದ್ದ.ಈ ವೇಳೆ ಆತನ ಗಂಟಲು ದ್ರವ ಮಾದರಿ ಪರೀಕ್ಷೆಗೊಳಪಡಿಸಿದ್ದು, ಸದ್ಯ ಆತನಿಗೆ ಕೊರೊನ ಸೋಂಕು ತಾಗಿರುವುದು ಖಚಿತವಾಗಿದೆ.

ಸ್ಥಳೀಯ ಜನತೆ ಆತಂಕಿತರಾಗಿದ್ದು , ಈತನ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ .ಹಚ್ಚುವ ಕಾರ್ಯ ಜಿಲ್ಲಾಡಳಿತ ಮಾಡುತ್ತಿದೆ

- Advertisement -

Latest News

error: Content is protected !!