- Advertisement -
- Advertisement -
ಬೆಂಗಳೂರು : ಕೊರೋನಾ ಸೋಂಕಿನ ಪ್ರಕರಣಗಳು ರಾಜ್ಯ ರಾಜಧಾನಿಯಲ್ಲಿ ಏರಿಕೆಯಾಗುತ್ತಿರುವ ಸಂದರ್ಭದಲ್ಲಿಯೇ, ಕೊರೋನಾ ಸೋಂಕಿತನಾಗಿ, ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಂತ ಸೋಂಕಿತನೊಬ್ಬನು ಆಸ್ಪತ್ರೆಯಿಂದ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.
ಇಂದು ಬೆಳಗ್ಗೆ 11.30ರ ಸುಮಾರಿಗೆ ಕೊರೊನಾ ಸೋಂಕಿತ ಮಾರ್ಷಲ್ ಗಳ ಬಳಿ ತಾನು ಹೋಟೆಲ್ ಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದಾರೆ. ಕೊರೊನಾ ಸೋಂಕಿತ ವಾಣಿ ವಿಲಾಸ ಆಸ್ಪತ್ರೆಯ ಮೂಲಕ ಪರಾರಿಯಾಗಿದ್ದಾನೆ.
ಇದೀಗ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಕೊರೋನಾ ಸೋಂಕಿತ ಆಸ್ಪತ್ರೆಯಿಂದ ಎಸ್ಕೇಪ್ ಆಗಿರುವ ಹಿನ್ನಲೆಯಲ್ಲಿ ಪೊಲೀಸರು ಎಸ್ಕೇಪ್ ಆಗಿರುವ ಸೋಂಕಿತನಿಗಾಗಿ ಹುಡುಕಾಟ ಶುರುಮಾಡಿದ್ದಾರೆ.
- Advertisement -