Saturday, June 6, 2026
Homeತಾಜಾ ಸುದ್ದಿತಂದೆ, ಪತ್ನಿ ಮಗಳಿಗೆ ಕೊರೋನಾ ದೃಢ: ಸಚಿವ ಸುಧಾಕರ್ ನಿವಾಸ ಸೀಲ್‍ಡೌನ್..!

ತಂದೆ, ಪತ್ನಿ ಮಗಳಿಗೆ ಕೊರೋನಾ ದೃಢ: ಸಚಿವ ಸುಧಾಕರ್ ನಿವಾಸ ಸೀಲ್‍ಡೌನ್..!

- Advertisement -
- Advertisement -

ಬೆಂಗಳೂರು, ಜೂ.24- ಪತ್ನಿ ಹಾಗೂ ಮಕ್ಕಳಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನಿವಾಸವನ್ನು ಸೀಲ್‍ಡೌನ್ ಮಾಡಲಾಗಿದೆ.

ಸದಾಶಿವನಗರದಲ್ಲಿರುವ ಅವರ ನಿವಾಸವನ್ನು ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲಾಗಿದ್ದು, ಸ್ವತಃ ಖುದ್ದು ಡಾ.ಕೆ.ಸುಧಾಕರ್ ಅವರೇ 14 ದಿನಗಳ ಕಾಲ ಹೋಂ ಕ್ವಾರಂಟೈನ್‍ಗೆ ಒಳಗಾಗುವುದಾಗಿ ತಮ್ಮ ಆಪ್ತರ ಬಳಿ ಹೇಳಿದ್ದಾರೆ.

ಸದ್ಯ ಮನೆಯಿಂದಲೇ ತಮ್ಮ ಇಲಾಖೆಯ ಕೆಲಸ-ಕಾರ್ಯಗಳನ್ನು ನಿರ್ವಹಿಸುತ್ತಿದ್ದು, 14 ದಿನಗಳ ಬಳಿಕ ಅವರು ಸಾರ್ವಜನಿಕರ ಸೇವೆಗೆ ಲಭ್ಯವಿರಲಿದ್ದಾರೆ.

ಡಾ.ಕೆ.ಸುಧಾಕರ್ ಅವರ ಪತ್ನಿ, ಹೆಣ್ಣು ಮಗು ಹಾಗೂ ಸಚಿವರ ತಂದೆಗೂ ಸೋಂಕು ಕಾಣಿಸಿಕೊಂಡಿದ್ದು, ಪ್ರತ್ಯೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.

- Advertisement -

Latest News

error: Content is protected !!