Saturday, May 18, 2024
Homeತಾಜಾ ಸುದ್ದಿಮುಂಬೈ: ಕೊರೋನಾ ಆಸ್ಪತ್ರೆಗೆ 50 ಬೆಡ್, ಆಕ್ಸಿಜನ್ ಸಿಲಿಂಡರ್ ನೀಡಿದ ನವ ದಂಪತಿ!

ಮುಂಬೈ: ಕೊರೋನಾ ಆಸ್ಪತ್ರೆಗೆ 50 ಬೆಡ್, ಆಕ್ಸಿಜನ್ ಸಿಲಿಂಡರ್ ನೀಡಿದ ನವ ದಂಪತಿ!

spot_img
- Advertisement -
- Advertisement -

ಮುಂಬೈ: ಮಹಾರಾಷ್ಟ್ರದ ವಾಸೈನಲ್ಲಿರುವ ನಂದಕುಲ ಗ್ರಾಮದ ನವ ವಿವಾಹಿತ ಜೋಡಿಯೊಂದು ಸತ್ಪಾಲಾ ಗ್ರಾಮದಲ್ಲಿರುವ ಕೋವಿಡ್ ಆಸ್ಪತ್ರೆಗೆ 50 ಬೆಡ್ ಹಾಗೂ ಆಕ್ಸಿಜನ್ ಸಿಲಿಂಡರ್ ನೀಡಿ ಮಾನವೀಯತೆ ಮೆರೆಯುವ ಮೂಲಕ ಸುದ್ದಿಯಾಗಿದ್ದಾರೆ. ಎರಿಕ್ ಆ್ಯಂಟನ್ ಲೊಬೊ(28 ವರ್ಷ) ಹಾಗೂ ಮೆರ್ಲಿನ್(27) ಎಂಬ ಜೋಡಿ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದಿಗೆ ಮಾತನಾಡಿರುವ ವರ ಲೋಬೋ, ಮದುವೆಗೆ ಸಾಮಾನ್ಯವಾಗಿ ಸುಮಾರು 2 ಸಾವಿರ ಮಂದಿ ಸೇರುವವರಿದ್ದರು. ಅಲ್ಲದೆ ವೈನ್ ಹಾಗೂ ಒಳ್ಳೆಯ ಊಟ ಇಲ್ಲವೆಂದರೆ ಮದುವೆ ಅಪೂರ್ಣವೆಂದೇ ಅರ್ಥ. ಇದಕ್ಕಾಗಿ ಸಾಕಷ್ಟು ಹಣ ಖರ್ಚಾಗುತ್ತದೆ. ಕೊರೋನಾ ಸಾಂಕ್ರಾಮಿಕದ ಹೊತ್ತಿನಲ್ಲಿ ಮದುವೆಗೆ ಇಷ್ಟು ಜನ ಸೇರುವಂತಿಲ್ಲ. ಹೀಗಾಗಿ ಈ ಹಣವನ್ನು ಬೇರೆ ರೀತಿಯಲ್ಲಿ ಬಳಕೆ ಮಾಡಲು ತೀರ್ಮಾನಿದೆವು ಎಂದು ಹೇಳಿದ್ದಾರೆ.

ಮದುವೆಯಲ್ಲೂ ಸಾಮಾಜಿಕ ಜವಾಬ್ದಾರಿ ಪ್ರದರ್ಶನ
ಇನ್ನು ಕೊರೋನಾ ವೈರಸ್ ಹಿನ್ನೆಲೆಯಿಂದಾಗಿ ಮದುವೆಗೆ ಕೇವಲ 22 ಮಂದಿಯಷ್ಟೇ ಭಾಗಿಯಾಗಿದ್ದು ಎಲ್ಲರೂ ಮಾಸ್ಕ್ ಧರಿಸಿದ್ದರು. ಅಲ್ಲದೆ ಸಾಮಾಜಿಕ ಅಂತರ ಕೂಡ ಕಾಯ್ದುಕೊಳ್ಳಲಾಗಿತ್ತು. ಪಲ್ಘಾರ್ ಜಿಲ್ಲೆಯಲ್ಲಿ ಸರಿ ಸುಮಾರು 90 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಸುಮಾರು 1, 500ಕ್ಕಿಂತಲೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ. ಹೀಗಾಗಿ ನಾವು ಕೋವಿಡ್ ಆಸ್ಪತ್ರೆಗೆ ಬೆಡ್ ಹಾಗೂ ಆಕ್ಸಿಜನ್ ಸಿಲಿಂಡರ್ ನೀಡುವ ನಿರ್ಧಾರಕ್ಕೆ ಬಂದೆವು ಎಂದು ಲೋಬೋ ವಿವರಿಸಿದ್ದಾರೆ.

- Advertisement -
spot_img

Latest News

error: Content is protected !!