Thursday, June 4, 2026
Homeಕರಾವಳಿಮಂಗಳೂರುಸುಳ್ಯದ ಮಹಿಳೆಯನ್ನು ಬಲಿ ಪಡೆದ ಕೊರೊನಾ

ಸುಳ್ಯದ ಮಹಿಳೆಯನ್ನು ಬಲಿ ಪಡೆದ ಕೊರೊನಾ

- Advertisement -
- Advertisement -

ಪುತ್ತೂರು : ಮಹಾಮಾರಿ ಕೊರೊನಾದ ಅಟ್ಟಹಾಸ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜಾಸ್ತಿಯಾಗನೇ ಇದೆ. ಗೊತ್ತೇ ಆಗದಂತೆ ಆ್ಯಟಾಕ್ಟ್ ಮಾಡುತ್ತಿದೆ ಕೊರೊನಾ. ಇದೀಗ ಸುಳ್ಯ ಮೂಲದ ಸುಮಾರು 62 ವರ್ಷದ ಮಹಿಳೆಯೊಬ್ಬರು ಕೊರೋನಾ ಸೋಂಕಿನಿಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುಳ್ಯ ಬೆಳ್ಳಾರೆ ನೆಟ್ಟಾರು ನಿವಾಸಿ ಮಹಿಳೆಯೊಬ್ಬರನ್ನು ನಿನ್ನೆ ಮಧ್ಯಾಹ್ನ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಬಿಪಿ, ಶುಗರ್, ಲಂಗ್ಸ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವೇಳೆ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಸೋಂಕು ಇರುವುದು ದೃಢಪಟ್ಟಿದೆ. ತೀರಾ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!