Saturday, June 6, 2026
HomeUncategorizedಎಂಟಿಆರ್ ಉತ್ಪಾದನಾ ಘಟಕದಲ್ಲಿ 34 ಮಂದಿಗೆ ಕೊರೊನಾ, ಕಂಪನಿ ಸೀಲ್ ಡೌನ್

ಎಂಟಿಆರ್ ಉತ್ಪಾದನಾ ಘಟಕದಲ್ಲಿ 34 ಮಂದಿಗೆ ಕೊರೊನಾ, ಕಂಪನಿ ಸೀಲ್ ಡೌನ್

- Advertisement -
- Advertisement -

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮೂಲೆ ಮೂಲೆಗೂ ವ್ಯಾಪ್ತಿಸುತ್ತಿದೆ ಕೊರೊನಾ. ಇದರ ಆರ್ಭಟ ಸದ್ಯಕ್ಕಂತೂ ನಿಲ್ಲುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ ಎಂಟಿಆರ್ ಗೂ ಕೊರೊನಾ ಬಿಸಿ ತಟ್ಟಿದೆ. ಎಂಟಿಆರ್ ಉತ್ಪನ್ನಗಳ ತಯಾರಿಕಾ ಘಟಕದಲ್ಲಿ 34 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಎಂಟಿಆರ್ ಕಂಪನಿಯನ್ನು ಸೀಲ್ ಡೌನ್ ಮಾಡಲಾಗಿದೆ.

ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ಎಂಟಿಆರ್ ಘಟಕದ ಸಿಬ್ಬಂದಿಯನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಿಗೆ ಕೊರೊನಾ ಸೋಂಕು ತಲುಗಿರೋದು ದೃಢಪಟ್ಟಿದೆ.ಹೀಗಾಗಿ ಸಿಬ್ಬಂದಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಕಂಪನಿಯನ್ನು ಸೀಲ್ ಡೌನ್ ಮಾಡಲಾಗಿದೆ. ಅಲ್ಲದೇ ಇಡೀ ಕಂಪನಿಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಹಾಗೇ ಇಲ್ಲಿನ ಉಳಿದ ಸಿಬ್ಬಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

- Advertisement -

Latest News

error: Content is protected !!