Thursday, May 2, 2024
Homeತಾಜಾ ಸುದ್ದಿಮಾನವೀಯತೆಯ ಎಲ್ಲದಕ್ಕೂ ಮಿಗಿಲು ಎಂದು ತೋರಿಸಿಕೊಟ್ಟ ಬಾಲಕ.. ಫೇಸ್ ಬುಕ್ ನಲ್ಲೀಗ ಈ ಹುಡುಗನದ್ದೇ ಹವಾ...

ಮಾನವೀಯತೆಯ ಎಲ್ಲದಕ್ಕೂ ಮಿಗಿಲು ಎಂದು ತೋರಿಸಿಕೊಟ್ಟ ಬಾಲಕ.. ಫೇಸ್ ಬುಕ್ ನಲ್ಲೀಗ ಈ ಹುಡುಗನದ್ದೇ ಹವಾ…

spot_img
- Advertisement -
- Advertisement -

ಬೆಂಗಳೂರು : ನಾವು ಚೆನ್ನಾಗಿದ್ರೆ ಸಾಕು, ನಮ್ಮ ಹೊಟ್ಟೆ ತುಂಬಿದ್ರೆ ಸಾಕು ಹೀಗೆ ಯೋಚಿಸುವವರೇ ಹೆಚ್ಚಿರುವ ಮಧ್ಯೆ ಪುಟ್ಟ ಬಾಲಕನೊಬ್ಬ ಹೀರೋ ಆಗಿದ್ದಾನೆ. ಅಷ್ಟಕ್ಕೂ ಆಗಿದ್ದು ಏನಪ್ಪಾ ಅಂದ್ರೆ, ನಿನ್ನೆ ಬೆಂಗಳೂರಿನಲ್ಲಿ ಒಂಜದು ವಾರಗಳ ಕಾಲ ಲಾಕ್ ಡೌನ್ ಇರೋದರಿಂದ ಅನೇಕರು ಬೆಂಗಳೂರು ತೊರೆದು ಊರಿನತ್ತ ಮುಖ ಮಾಡಿದ್ದಾರೆ. ಹೀಗೆ ಊರಿಗ ತೆರಳುವುದಕ್ಕೆ ಅಂತಾ ಒಂದು ತಾಯಿ ಹಾಗೂ ಮಗು ಮೆಜೆಸ್ಟಿಕ್ ಬಂದಿದ್ದಾರೆ.

ಅನುಭವಿಸದ ಹಸಿವು ಹೇಗೆ ಇನ್ನೊಬ್ಬ ಹಸಿವು ನೀಗಿಸಲು ಪ್ರಯತ್ನ ಮಾಡುತ್ತದೆ. ಅದಕ್ಕೆ ಜೀವನದಲ್ಲಿ ನೋವು ಅನುಭವಿಸ ಬೇಕು ??#COVID #HUNGRY #humanity #loveandcare

Posted by Hampanna Bk on Tuesday, 14 July 2020

ಈ ವೇಳೆ ಮಗು ತಾಯಿಯ ಬಳಿ ಹಸಿವು ಹಸಿವು ಅಂತಾ ಅಳೋದಕ್ಕೆ ಶುರು ಮಾಡಿದ್ದೆ. ಇದನ್ನು ಗಮನಿಸಿದ ಅಲ್ಲೇ ಇದ್ದ ಪುಟ್ಟ ಬಾಲಕನೊಬ್ಬ ತಾನು ತಿನ್ನೋದಕ್ಕೆ ಅಂತಾ ತೆಗೆದುಕೊಂಡಿದ್ದ ತಿಂಡಿ ತಿನಿಸುಗಳನ್ನು ಮಗುವಿಗೆ ನೀಡಿದ್ದಾನೆ. ಕೂಡಲೇ ಅದನ್ನು ಗಮನಿಸಿದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದಾರೆ. ಅಲ್ಲದೇ ಬಾಲಕನನ್ನು ಪ್ರಸ್ನಿಸಿದ್ದಾರೆ. ನೀನು ಎಲ್ಲಿ ಹೋಗ್ಬೇಕು? ನಿನಗೆ ಅಂತಾ ತೆಗೆದುಕೊಂಡಿದ್ದನ್ನು ಮಗುವಿಗೆ ಕೊಟ್ಯಾ ಅಂತಾ… ಆಗ ಆ ಬಾಲಕ ನಾನು ಮಧುಗಿರಿಗೆ ಹೋಗ್ಬೇಕು ಅಂದಿದ್ದಾನೆ. ನಮ್ಗೆ ಸ್ಕೂಲಲ್ಲಿ ಒಂದು ಗಂಟೆ ಊಟ ತಡವಾದರೆ ಹಸಿವು ತಡ್ಕೊಳೋದಕ್ಕೆ ಸಾಧ್ಯವಾಗುವುದಿಲ್ಲ. ಅಂತಹದರಲ್ಲಿ ಈ ಮಗು ಹೇಗಿರುತ್ತೆ ಪಾಪ ಅಂತಾ ಬಾಲಕ ಹೇಳಿದ್ದಾನೆ. ಬಾಲಕನ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -
spot_img

Latest News

error: Content is protected !!