ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಕೊರೋನಾ ಅಟ್ಟಹಾಸ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿರುವ ಈ ಮಹಾಮಾರಿ ಸದ್ಯಕ್ಕೆ ಶಾಂತವಾಗುವುದು ಕಾಣುತ್ತಿಲ್ಲ.
ಇಂದು ಕುಲಶೇಖರ ಪ್ರದೇಶದ ಶಕ್ತಿನಗರ ನಿವಾಸಿಗಳಾದ ತಾಯಿ (80 ವ) ಮತ್ತು ಮಗ (45 ವ) ಕೊರೊನ ಪಾಸಿಟಿವ್ ಇರುವುದು ಪರೀಕ್ಷೆಯಲ್ಲಿ ದೃಢವಾಗಿದೆ. ಇವರು ಕೆಲದಿನಗಳ ಹಿಂದೆ ಮಂಗಳೂರಿನ ಪಡೀಲ್ ನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕೊರೊನ ರೋಗಕ್ಕೆ ತುತ್ತಾಗಿ ಮೃತರಾಗಿದ್ದ ಬಂಟ್ವಾಳದ ವೃದ್ಧ ಮಹಿಳೆಯ ಪಕ್ಕದ ಕೊಠಡಿಯಲ್ಲಿ ಚಿಕಿತ್ಸೆ ಪಡೆದಿದ್ದರು ನಂತರ ಇವರನ್ನು ಕ್ವಾರಂಟೈನ್ ನಲ್ಲಿಡಲಾಗಿತ್ತು.
ಇಂದು ಮಧ್ಯಾಹ್ನ ಬಂದಿರುವ ವೈದ್ಯಕೀಯ ವರದಿಯಂತೆ ಈ ತಾಯಿಮಗನಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ಹಿನ್ನಲೆಯಲ್ಲಿ ಇವರು ನೆಲೆಸಿರುವ ಕುಲಶೇಖರ ಪ್ರದೇಶದ ಶಕ್ತಿನಗರ ಮುಗ್ರೋಡಿ ಏರಿಯಾ ಸೀಲ್ ಡೌನ್ ಮಾಡಲಾಗಿದೆ.ಈ ಪ್ರದೇಶದ ಸುತ್ತಮುತ್ತಲಿನ 7 ಕಿ.ಮಿ ವ್ಯಾಪ್ತಿ ಬಫರ್ ಝೋನ್ ಗೆ ಬರಲಿದೆ.
ಇಂದು ರಾಜ್ಯದಲ್ಲಿ ಒಟ್ಟು 8 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 511 ಸೋಂಕು ದೃಢ ಪ್ರಕರಣಗಳು ದಾಖಲಾಗಿವೆ
ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗಿದೆ.