- Advertisement -
- Advertisement -
ಅಹ್ಮದಾಬಾದ್ : ವಿಶ್ವದೆಲ್ಲೆಡೆ ತನ್ನ ಮರಣಮೃದಂಗ ಮುಂದುವರೆಸಿದ ಕೋವಿಡ್ 19 ಇಂದು ಭಾರತದಲ್ಲಿ ರಾಜಕಾರಣಿಯೊಬ್ಬರ ಮೊದಲ ಬಳಿ ಪಡೆದಿದೆ .ಕೊರೊನಾ ಸೋಂಕಿನಿಂದಾಗಿ ಗುಜರಾತ್ ರಾಜ್ಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಅಹಮದಾಬಾದ್ ಕಾರ್ಪೋರೇಟರ್ ಬದ್ರುದ್ದೀನ್ ಶೇಖ್ ಅವರು ಎ.26 ರಂದು ಸಾವನ್ನಪ್ಪಿದ್ದಾರೆ..
ಈ ಬಗ್ಗೆ ಕಾಂಗ್ರೆಸ್ ನಾಯಕ ಶಕ್ತಿಸಿನ್ಹ ಗೋಹಿಲ್ ಅವರು ಟ್ವಿಟ್ಟರ್‌ನಲ್ಲಿ ವಿಡಿಯೋ ಮಾಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಗೆಳೆಯ ಬದ್ರುದ್ದೀನ್, ನಿಜವಾಗಿ ಕೊರೊನಾ ವಾರಿಯರ್. ಆತ ಗುಜರಾತಿನ ಅಹಮದಾಬಾದ್‌ನಲ್ಲಿ ಬಡ ಜನರಿಗೆ ನೆರವು ನೀಡಲು ಹೋಗಿದ್ದ ಸಂದರ್ಭ ಸೋಂಕು ತಗುಲಿತ್ತು. ಅವರ ಸಾವು ಗುಜರಾತ್ ಕಾಂಗ್ರೆಸ್ ಕುಟುಂಬಕ್ಕೆ ತುಂಬಲಾರದ ನಷ್ಟ. ಎಲ್ಲರಿಗೂ ಇದೊಂದು ಪಾಠವಾಗಲಿ. ದಯವಿಟ್ಟು ಎಲ್ಲರೂ ಮುಂಜಾಗ್ರತೆ ವಹಿಸಿ ಹಾಗೂ ಸ್ಥಳೀಯ ಆಡಳಿತದೊಂದಿಗೆ ಸಹಕರಿಸಿ ಎಂದು ಕೋರಿದ್ದಾರೆ.
- Advertisement -