Tuesday, May 14, 2024
Homeಚಿಕ್ಕಮಗಳೂರುಚಿಕ್ಕಮಗಳೂರು: ಗೋಮಾಂಸ ಕಡಿಯುವಾಗ ಮಾರುವೇಷದಲ್ಲಿ ದಾಳಿ ನಡೆಸಿದ ಪೊಲೀಸರು: ನದಿ ದಾಟಿ ಓಡಿ ಹೋದ ಗೋಕಳ್ಳರು

ಚಿಕ್ಕಮಗಳೂರು: ಗೋಮಾಂಸ ಕಡಿಯುವಾಗ ಮಾರುವೇಷದಲ್ಲಿ ದಾಳಿ ನಡೆಸಿದ ಪೊಲೀಸರು: ನದಿ ದಾಟಿ ಓಡಿ ಹೋದ ಗೋಕಳ್ಳರು

spot_img
- Advertisement -
- Advertisement -

ಚಿಕ್ಕಮಗಳೂರು : ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಇದರ ನಡುವೆ ಮಲೆನಾಡು, ಕರಾವಳಿ ಭಾಗದಲ್ಲಿ ನಿತ್ಯ ಗೋಕಳ್ಳತನ ,ಅಕ್ರಮ ಗೋಮಾಂಸ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಮಲೆನಾಡಿನ ಭಾಗದಲ್ಲೂ  ಕೂಡ ನಿರಂತರವಾಗಿ ಗೋಕಳ್ಳತನ ಅಕ್ರಮ ಗೋಮಾಂಸ ಮಾರಾಟ ನಡೆದಿದೆ. ಇದಕ್ಕೆ ಪೊಲೀಸರು ಎಷ್ಟೇ ಕಡಿವಾಣ ಹಾಕಿದರೂ ಈ ಅಕ್ರಮ ದಂಧೆ  ಮಾತ್ರ ಇನ್ನೂ ನಿಂತಿಲ್ಲ .ಇದಕ್ಕೆ ಸಾಕ್ಷಿ ಎನ್ನುವಂತೆ ಮಲೆನಾಡಿನ ಜಯಪುರದಲ್ಲಿ ಪೊಲೀಸರು ಮಾರು ವೇಷದಲ್ಲಿ ಅಕ್ರಮ ಗೋಮಾಂಸದ ಅಡ್ಡೆ ಮೇಲೆ ದಾಳಿ ನಡೆಸಿರುವುದು.‌.

ಗೋವುಗಳನ್ನ ಕಡಿದು ಅಕ್ರಮವಾಗಿ ಗೋ ಮಾಂಸ ಬೇರ್ಪಡಿಸುವಾಗ ದಾಳಿ ಮಾಡಿದ ಪೋಲಿಸರ ಮೇಲೆ ಹಲ್ಲೆಗೆ ಮುಂದಾಗಿ ಕತ್ತಲಲ್ಲಿ ನದಿಗೆ ಹಾರಿ ಗೋಕಳ್ಳರು ತಪ್ಪಿಸಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹೇರೂರು ಗ್ರಾಮದಲ್ಲಿ ನಡೆದಿದೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಹೇರೂರು-ಸ್ಥಿರೂರು ಗ್ರಾಮದ ರಾಮೇಗೌಡ ಎಂಬುವರ ಕಾಫಿ ತೋಟದ ಲೈನ್‍ನಲ್ಲಿ ಅಪರಿಚಿತರು ಅಕ್ರಮವಾಗಿ ಗೋವುಗಳನ್ನ ಕಡಿದು ಮಾಂಸ ಬೇರ್ಪಡಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಬಾಳೆಹೊನ್ನೂರು ಪೋಲೀಸರು  ಮಾರುವೇಷದಲ್ಲಿ  ದಾಳಿ ನಡೆಸಿದ್ದಾರೆ…

ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಮಾರುವೇಷದಲ್ಲಿ ದಾಳಿ ನಡೆಸಿದ ಸಮಯದಲ್ಲಿ ಸುಮಾರು ಒಂದು ಕ್ವಿಂಟಾಲ್ ಗೋಮಾಂಸವನ್ನ ವಶಪಡಿಸಿಕೊಂಡಿದ್ದಾರೆ. ಪೊಲೀಸರ ದಾಳಿ ವೇಳೆ ಎಸ್ಟೇಟ್‍ನ ಕೂಲಿ ಕಾರ್ಮಿಕರ ಲೈನ್‍ನ ಮನೆಯೊಂದರಲ್ಲಿ ಐದು ಜನ ಹಸುವನ್ನ ಕಡಿಯುತ್ತಿದ್ರು. ಈ ವೇಳೆಯಲ್ಲಿ ಪೊಲೀಸರನ್ನ ಕಂಡ ಕೂಡಲೇ ಮಾಂಸ ಕಡಿಯುತ್ತಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಪರಾರಿಯಾಗುವ ವೇಳೆ ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆಸಿ ಪೊಲೀಸರ ಮೇಲೆ ದಾಳಿ ಮುಂದಾಗಿದ್ದಾರೆ.ಅದರಲ್ಲಿ ಕೆಲವರು  ಕತ್ತಲಲ್ಲಿ ನದಿಗೆ ಹಾರಿ ತಪ್ಪಿಸಿಕೊಂಡಿದ್ದಾರೆ. ಸ್ಥಳದಲ್ಲಿ ಒಂದು ಕ್ವಿಂಟಾಲ್ ಗೋ ಮಾಂಸ, ದನದ ಕತ್ತರಿಸಿದ ಒಂದು ಕಾಲು ಪತ್ತೆಯಾಗಿದೆ. ಆರೋಪಿಗಳು ಮಾಂಸ ಮಾರಾಟದ ಉದ್ದೇಶದಿಂದ ದನಗಳನ್ನು ಹಲವೆಡೆಗಳಿಂದ ಕಳವು ಮಾಡಿಕೊಂಡು ಬಂದು ಮಾಂಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಪರಾರಿಯಾದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ ಪರಾರಿಯಾದ ಗೋಕಳ್ಳರು ಕಾಫಿ ತೋಟಕ್ಕೆ ಕೆಲಸಕ್ಕೆ ಬಂದಿದ್ದ ಅಕ್ರಮ ಬಾಂಗ್ಲಾ ನಿವಾಸಿಗಳು ಎನ್ನುವ ಆರೋಪ ಕೇಳಿಬಂದಿದೆ…

- Advertisement -
spot_img

Latest News

error: Content is protected !!