Wednesday, June 3, 2026
Homeಕೊಡಗುವಯನಾಡಿನಲ್ಲಿ ನಡೆದ ದುರಂತದಲ್ಲಿ ಕೊಡಗಿನ ನಾಲ್ಕನೇ ತರಗತಿ ಬಾಲಕ ಸಾವು

ವಯನಾಡಿನಲ್ಲಿ ನಡೆದ ದುರಂತದಲ್ಲಿ ಕೊಡಗಿನ ನಾಲ್ಕನೇ ತರಗತಿ ಬಾಲಕ ಸಾವು

- Advertisement -
- Advertisement -

ಕೊಡಗು: ವಯನಾಡಿನಲ್ಲಿ ನಡೆದ ದುರಂತದಲ್ಲಿ ಸಂಬಂಧಿಕರ ಮನೆಗೆ ತೆರಳಿದ್ದ ಕೊಡಗಿನ ನಾಲ್ಕನೇ ತರಗತಿ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.

 ವಿರಾಜಪೇಟೆ ತಾಲೂಕು ಸಿದ್ದಾಪುರ ಗುಯ್ಯ ಸರಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ರೋಹಿತ್ ಸಾವನ್ನಪ್ಪಿದ ಬಾಲಕ.  ಬುಧವಾರ ಬಾಲಕನ ಮೃತದೇಹ ಪತ್ತೆಯಾಗಿದೆ.

ಗುಯ್ಯ ಶಾಲೆ ಬಳಿ ಬಾಡಿಗೆ ಮನೆಯಲ್ಲಿರುವ ರವಿ ಮತ್ತು ಕವಿತಾ ದಂಪತಿ ಕೂಲಿಕಾರ್ಮಿಕರಾಗಿದ್ದು ತಾಯಿ ಕವಿತಾಳೊಂದಿಗೆ ಮೇಪಾಡಿ ಹೋಗಿದ್ದ ರೋಹಿತ್ ಸಂಬಂಧಿಕರ ಮನೆಯಲ್ಲಿದ್ದ.

ಸೋಮವಾರ ರಾತ್ರಿ ನಡೆದ ವಯನಾಡು ದುರಂತದಲ್ಲಿ ಬಾಲಕ ಕೂಡ ಮಣ್ಣಿನಡಿ ಕೊಚ್ಚಿಹೋಗಿದ್ದು ಇಂದು ರಕ್ಷಣಾ ಕಾರ್ಯಾಚರಣೆ ಮಾಡುತ್ತಿರುವ ತಂಡಕ್ಕೆ ಬಾಲಕನ ಮೃತದೇಹ ದೊರೆತಿದೆ.

- Advertisement -

Latest News

error: Content is protected !!