- Advertisement -
- Advertisement -
ಮುಂಬೈ: ಮಹಾರಾಷ್ಟ್ರದ ವಸತಿ ಸಚಿವ ಮತ್ತು ಮುಂಬ್ರಾ ಕ್ಷೇತ್ರದ ಶಾಸಕ ಜಿತೇಂದ್ರ ಅವದ್ ಅವರಿಗೆ ಕರೊನಾ ಸೋಂಕು ಇರುವುದು ಇಂದು ನಡೆದ ತಪಾಸಣೆಯಲ್ಲಿ ದೃಢವಾಗಿದೆ. ಕರೊನಾ ಸೋಂಕಿತರ ಸಂಪರ್ಕಕ್ಕೆ ಹೋಗಿದ್ದ ಅವರು ಏ.13ರಿಂದಲೂ ಸೆಲ್ಫ್ ಕ್ವಾರಂಟೈನ್ನಲ್ಲಿ ಇದ್ದರು. ನಿನ್ನೆ ತಪಾಸಣೆ ನಡೆಸಿದಾಗ ಕರೊನಾ ನೆಗೆಟಿವ್ ಎಂದು ವರದಿ ಬಂದಿತ್ತು.
ಆದರೂ ಕ್ವಾರಂಟೈನ್ ಅವಧಿ ಮುಗಿಸುತ್ತೇನೆ ಎಂದಿದ್ದ ಜಿತೇಂದ್ರ ಅವರಿಗೆ ಇಂದು ಸೋಂಕು ದೃಢಪಟ್ಟಿದೆ. ಸ್ವಲ್ಪ ದಿನಗಳ ಹಿಂದೆ ಜಿತೇಂದ್ರ ಅವರ ಮನೆಯ ಹೌಸ್ಕೀಪಿಂಗ್ ಕೆಲಸಗಾರರು, ಐವರು ಭದ್ರತಾ ಸಿಬ್ಬಂದಿಯಲ್ಲಿ ಕರೊನಾ ವೈರಸ್ ದೃಢಪಟ್ಟಿತ್ತು.
ತಮ್ಮ ನೇರ ಸಂಪರ್ಕದಲ್ಲಿದ್ದ ಸುಮಾರು 14 ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡ ಬಳಿಕ, ಸಚಿವರೂ ಸೆಲ್ಫ್ ಕ್ವಾರಂಟೈನ್ಗೆ ಒಳಗಾಗಿದ್ದರು. ಅನೇಕ ದಿನಗಳಿಂದ ಜಿತೇಂದ್ರ ಅವದ್ ಅವರು ಯಾರ ಸಂಪರ್ಕಕ್ಕೂ ಹೋಗಿಲ್ಲದ ಕಾರಣ ಉಳಿದ ಅವರ ಸಹದ್ಯೋಗಿಗಳಿಗೆ ಸೋಂಕು ತಗುಲುವ ಅಪಾಯ ಕಡಿಮೆ ಎನ್ನಲಾಗಿದೆ.
- Advertisement -