Friday, June 2, 2023
Homeಕರಾವಳಿಮತ್ತೆ ಜೀವಪಡೆದ ಮಾಣಿ – ಮೈಸೂರು ಹೆದ್ದಾರಿ ಡಾಮರೀಕರಣ ಕಾಮಗಾರಿ

ಮತ್ತೆ ಜೀವಪಡೆದ ಮಾಣಿ – ಮೈಸೂರು ಹೆದ್ದಾರಿ ಡಾಮರೀಕರಣ ಕಾಮಗಾರಿ

- Advertisement -
- Advertisement -

ಪುತ್ತೂರು.ಏ-23: ಕೊರೋನಾ ಲಾಕ್‌ಡೌನ್ ಜಾರಿಯಾದ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಡಾಮರೀಕರಣ ಕಾಮಗಾರಿ ಮತ್ತೆ ಆರಂಭಗೊಂಡಿದೆ.

ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ತನ್ನ ಸುಪರ್ದಿಗೆ ಪಡೆದುಕೊಂಡ ನಂತರ ನಡೆಯುತ್ತಿರುವ ದೊಡ್ಡ ಪ್ರಮಾಣದ ಮೊದಲ ಕಾಮಗಾರಿ ಇದಾಗಿದ್ದು, ಹಾಲಿ ರಸ್ತೆಯ ಮೇಲೆ ಪೂರ್ಣ ಪ್ರಮಾಣದಲ್ಲಿ ಡಾಮರೀಕರಣ ನಡೆಸಲಾಗುತ್ತಿದೆ. ಇದಕ್ಕಾಗಿ ಒಟ್ಟು 25 ಕೋಟಿ ರೂ. ಮಂಜೂರಾಗಿದೆ.ಈ ಹಿಂದೆ ನಡೆದ ಕಾಮಗಾರಿಯಲ್ಲಿ ಮಾಣಿಯಿಂದ ಪ್ರಾರಂಭಗೊಂಡು ಸಂಪ್ಯ ತನಕ ಸುಮಾರು 18 ಕಿ.ಮೀ. ಪೂರ್ಣಗೊಂಡಿತ್ತು. ಹಾಗೆಯೇ ಜಾಲ್ಸೂರಿನಿಂದಲೂ 15 ಕಿ.ಮೀ. ಪೂರ್ತಿಗೊಂಡಿತ್ತು. ಇನ್ನು 22 ಕಿ.ಮೀ. ಹಾಗೂ 16.6 ಕಿ.ಮೀ. ಸೇರಿ ಒಟ್ಟು ಸುಮಾರು 37.6 ಕಿ. ಮೀ. ಮರು ಡಾಮರು ಕಾಮಗಾರಿ ಬಾಕಿಯಿದ್ದು, ಆ ಕಾಮಗಾರಿಯನ್ನು ಪೂರ್ಣಗೊಳಿಸಲು ಕೆಲಸ ಆರಂಭಿಸಲಾಗಿದೆ.

- Advertisement -

Latest News

error: Content is protected !!