Friday, June 28, 2024
Homeಕರಾವಳಿಉಡುಪಿಭಂಡ ಧೈರ್ಯ ಮಾಡಿ ಹಿಂದುತ್ವದ ಧ್ವನಿಯಾಗಲು ಚುನಾವಣೆಯಲ್ಲಿ ಸ್ಫರ್ಧೆ; ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ರಘುಪತಿ ಭಟ್ ಹೇಳಿಕೆ

ಭಂಡ ಧೈರ್ಯ ಮಾಡಿ ಹಿಂದುತ್ವದ ಧ್ವನಿಯಾಗಲು ಚುನಾವಣೆಯಲ್ಲಿ ಸ್ಫರ್ಧೆ; ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ರಘುಪತಿ ಭಟ್ ಹೇಳಿಕೆ

spot_img
- Advertisement -
- Advertisement -

ಶಿವಮೊಗ್ಗ: ಭಂಡ ಧೈರ್ಯ ಮಾಡಿ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಫರ್ಧೆ ಮಾಡಿದ್ದು, ಬಿಜೆಪಿ ಕಾರ್ಯಕರ್ತರು ನಮ್ಮ ಕಾರ್ಯಕರ್ತರು ಎಂದು ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಘುಪತಿ ಭಟ್, ಹಿಂದುತ್ವದ ಧ್ವನಿಯಾಗಲು ಸ್ಪರ್ಧಿಸುತ್ತಿದ್ದು, ಲಾಬಿ ಮಾಡುವುದಿದ್ದರೆ ಬಕೆಟ್ ಹಿಡಿದು ಟಿಕೆಟ್ ತರುತ್ತಿದ್ದೆ ಎಂದು ಹೇಳಿದ್ದಾರೆ.

ನಾನು ಗೆದ್ದ ನಂತರ ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ ಎಂದು ಹೇಳಿರುವ ರಘುಪತಿ ಭಟ್, ಸೋತರೂ ನಾನು ಬಿಜೆಪಿ ಜೊತೆಯಲ್ಲೇ ಇರುತ್ತೇನೆ ಎಂದಿದ್ದಾರೆ.

ಅಲ್ಲದೇ, ಚುನಾವಣೆಯಲ್ಲಿ ಸೋತರೇ ಅದು ನನ್ನದೇ ಸೋಲು ಹೊರತು ಹಿಂದುತ್ವಕ್ಕೆ ಸೋಲು ಅಲ್ಲ ಎಂದೂ ರಘುಪತಿ ಭಟ್ ತಿಳಿಸಿದ್ದಾರೆ

- Advertisement -
spot_img

Latest News

error: Content is protected !!