Thursday, June 25, 2026
Homeಕರಾವಳಿಉಡುಪಿಉಡುಪಿ: ಮಳೆಯಿಂದಾಗಿ ಕುಸಿದು ಬಿದ್ದ ಮನೆಯ ಆವರಣದಲ್ಲಿದ್ದ ಬಾವಿ

ಉಡುಪಿ: ಮಳೆಯಿಂದಾಗಿ ಕುಸಿದು ಬಿದ್ದ ಮನೆಯ ಆವರಣದಲ್ಲಿದ್ದ ಬಾವಿ

- Advertisement -
- Advertisement -

ಉಡುಪಿ: ಭಾರೀ ಮಳೆಗೆ ಮನೆಯ ಆವರಣದಲ್ಲಿದ್ದ ಬಾವಿ ಕುಸಿದ ಘಟನೆ ಕಾರ್ಕಳದಲ್ಲಿ ಸಂಭವಿಸಿದೆ.ಕಾರ್ಕಳ ತಾಲೂಕಿನ ಹಿರ್ಗಾನದಲ್ಲಿ ಘಟನೆ ನಡೆದಿದ್ದು, ಮನೆಯ ಪಕ್ಕದಲ್ಲೇ ಇದ್ದ ಬಾವಿ ಕುಸಿದು ಬಿದ್ದಿದೆ.

ಬಾವಿ ಕುಸಿದ ಪರಿಣಾಮ ಬಾವಿಯ ಪಕ್ಕದಲ್ಲೇ ಇರುವ ಮನೆಗೆ ಈಗ ಅಪಾಯದ ಪರಿಸ್ಥಿತಿ ಎದುರಾಗಿದೆ.ನಿನ್ನೆ ಸಂಜೆ ಬಾವಿ ಕುಸಿದು ಹೋಗಿದ್ದು, ಕುಸಿಯುವ ದೃಶ್ಯ ಮೊಬೈಲ್ ಫೋನ್ ನಲ್ಲಿ ಸೆರೆಯಾಗಿದೆ.

ಘಟನೆ ನಡೆಯುವ ವೇಳೆ ಬಾವಿಯ ಪಕ್ಕದಲ್ಲಿ ಯಾರೂ ಇಲ್ಲದಿದ್ದ ಕಾರಣ ಸಂಭಾವ್ಯ ಅನಾಹುತ ತಪ್ಪಿ ಹೋಗಿದೆ.

- Advertisement -

Latest News

error: Content is protected !!