Saturday, June 6, 2026
Homeಅಪರಾಧಆರೋಪಿ ಪ್ರವೀಣ್ ಅರುಣ್ ಚೌಗುಲೆ ಜಾಮೀನು ಅರ್ಜಿ ವಜಾ

ಆರೋಪಿ ಪ್ರವೀಣ್ ಅರುಣ್ ಚೌಗುಲೆ ಜಾಮೀನು ಅರ್ಜಿ ವಜಾ

- Advertisement -
- Advertisement -

ಉಡುಪಿ: ಏರ್ ಹೋಸ್ಟೆಸ್ ಸೇರಿ ನಾಲ್ವರ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಜಾಮೀನು ಅರ್ಜಿ ವಜಾವಾಗಿದೆ.

2023ರ ನವೆಂಬರ್ 12ರಂದು ಉಡುಪಿ ಜಿಲ್ಲೆಯ ಮಲ್ಪೆ ಠಾಣೆಯ ನೇಜಾರ್ ಎಂಬಲ್ಲಿ ಪ್ರವೀಣ್ ಅರುಣ್ ಚೌಗುಲೆ ಒಂದೇ ಕುಟುಂಬದ ಐನಾಜ್, ಹಸೀನಾ, ಅಫ್ನಾನ್, ಅಸೀಮ್ ಎಂಬುವರ ಹತ್ಯೆ ನಡೆಸಿದ್ದಾರೆ.

ಸಾಂದರ್ಭಿಕ ಸಾಕ್ಷಿ, ಸಿಸಿಟಿವಿ ದೃಶ್ಯಾವಳಿ, ಆರೋಪಿಯ ಕೂದಲಿನ ಡಿಎನ್ಎ ಆಧರಿಸಿ ಹೆಚ್ಚುವರಿ ಎಸ್ ಪಿಪಿ ಬಿ.ಎನ್.ಜಗದೀಶ್ ವಾದ ಮಾಡಿದರು. ವಿಚಾರಣೆ ನಡೆಸಿದ ನ್ಯಾ.ಎಂ.ಜಿ.ಉಮಾ ಅವರಿದ್ದ ಹೈಕೋರ್ಟ್ ಪೀಠ ಜಾಮೀನು ಅರ್ಜಿ ತಿರಸ್ಕರಿಸಿದೆ. ಇನ್ನು ಉಡುಪಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರವರಿಯಲ್ಲಿ 15 ಸಂಪುಟಗಳ 2,202 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

- Advertisement -

Latest News

error: Content is protected !!