- Advertisement -
![]()
- Advertisement -
ಮಂಗಳೂರು: ಸ್ಕೂಟರ್ ಗೆ ಕಂಟೈನರ್ ಲಾರಿ ಡಿಕ್ಕಿಯಾಗಿ ಸಹ ಸವಾರೆ ಸಾವನ್ನಪ್ಪಿರುವ ಘಟನೆ ಕೂಳೂರು ಸೇತುವೆ ಬಳಿ ನಡೆದಿದೆ.ಲಾವಣ್ಯ (27) ಮೃತ ದುರ್ದೈವಿ.

ಲಾವಣ್ಯ ಅವರು ತಮ್ಮ ಪತಿ ಜೊತೆ ಸ್ಕೂಟರ್ ನಲ್ಲಿ ಪಣಂಬೂರಿನಿಂದ ಕಾವೂರು ಕಡೆಗೆ ತೆರಳುತ್ತಿದ್ದ ವೇಳೆ ಕೂಳೂರು ಸೇತವೆ ಬಳಿ ಕಂಟೇನರ್ ಲಾರಿ ಚಾಲಕ ಅಜಾಗರೂಕತೆಯಿಂದಾಗಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಇಬ್ಬರೂ ಸ್ಕೂಟರ್ ನಿಂದ ರಸ್ತೆಗೆ ಬಿದ್ದಿದ್ದು, ಲಾವಣ್ಯ ಅವರ ತಲೆ ಮೇಲೆ ಲಾರಿಯ ಹಿಂಭಾಗದ ಚಕ್ರ ಹರಿದಿದ್ದು, ಅವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಶಕೀಲ್ ಸುವರ್ಣ ಇವರಿಗೆ ಸಣ್ಣ ಗಾಯವಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
- Advertisement -


