Thursday, June 4, 2026
Homeಕರಾವಳಿಬೆಳ್ತಂಗಡಿ; ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ಕಾರ್ಯಕರ್ತರು

ಬೆಳ್ತಂಗಡಿ; ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ಕಾರ್ಯಕರ್ತರು

- Advertisement -
- Advertisement -

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರ ಕಾರ್ಯ ಆರಂಭಿಸಿದ್ದು, ಎಲ್ಲೆಡೆ ಬಿಜೆಪಿ ಪರವಾದ ಗಾಳಿ ಬೀಸುತ್ತಿದೆ. ಕಾಂಗ್ರೆಸ್‌ ಪಕ್ಷದ ಧರ್ಮವಿರೋಧಿ ನೀತಿ, ದೇಶವಿರೋಧಿ ಚಿಂತನೆಗಳನ್ನು ವಿರೋಧಿಸಿ ಮತ್ತು ಬೆಳ್ತಂಗಡಿ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯಗಳಿಗೆ ಮನಸೋತು ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಜೊತೆ ಕೈ ಜೋಡಿಸುತ್ತಿದ್ದಾರೆ.

ಮೂಡುಕೋಡಿ ಗ್ರಾಮದ ಹೆನ್ರಿ ಡಿಸೋಜ ಕಾಳಗುರಿ, ಶ್ರೀಧರ ಪೂಜಾರಿ ಕುಕ್ಕರಲ್ಕೆ, ಅಕ್ಷಯ್ ಪೂಜಾರಿ, ಲಲಿತಾ, ಸವಿತಾ, ವಾರಿಜ, ಸುನೀಲ್, ಸುನಿತಾ, ಕುಸುಮ ಕುದ್ರಲ್ಕೆ ,ಅಣ್ಣುಶೆಟ್ಟಿ ಬೆದ್ರಡ್ಧ, ಕೀರ್ತನ್ ಪುತ್ತಿಲಕಜೆ, ಇನಾಸ್ ಡಿಸೋಜ ಕುದ್ರಪಲ್ಕೆ, ರಾಜು ನಾಯ್ಕ  ಕೊಪ್ಪದ ಬಾಕಿಮಾರು ಮತ್ತು ಬೆಳ್ತಂಗಡಿ ತಾಲೂಕು ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯರಾದ ಕೇಶವ ಪಿಲ್ಯ, ದ.ಕ. ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಎನ್. ಸಿ. ಸಂಜೀವ ನೆರಿಯ ಅವರು ತಮ್ಮ ಸಂಗಡಿಗರೊಂದಿಗೆ ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು  ಶಾಸಕ ಹರೀಶ್‌ ಪೂಂಜ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.

- Advertisement -

Latest News

error: Content is protected !!