Wednesday, June 3, 2026
Homeರಾಜಕೀಯಕರ್ನಾಟಕದಲ್ಲಿ ಸಿದ್ಧು, ಪಂಜಾಬ್ ನಲ್ಲಿ ಸಿಧು ಇಬ್ಬರಿಂದಲೇ ಕಾಂಗ್ರೆಸ್ ನಾಶವಾಗಲಿದೆ: ಜಗದೀಶ್ ಶೆಟ್ಟರ್

ಕರ್ನಾಟಕದಲ್ಲಿ ಸಿದ್ಧು, ಪಂಜಾಬ್ ನಲ್ಲಿ ಸಿಧು ಇಬ್ಬರಿಂದಲೇ ಕಾಂಗ್ರೆಸ್ ನಾಶವಾಗಲಿದೆ: ಜಗದೀಶ್ ಶೆಟ್ಟರ್

- Advertisement -
- Advertisement -

ಬೆಂಗಳೂರು: ಕರ್ನಾಟಕದಲ್ಲಿ ಸಿದ್ಧು, ಪಂಜಾಬ್ ನಲ್ಲಿ ಸಿಧು ಇಬ್ಬರಿಂದಲೇ ಕಾಂಗ್ರೆಸ್ ನಾಶವಾಗಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಪಂಜಾಬ್ ನಲ್ಲಿ ನವಜೋತ್ ಸಿಂಗ್ ಸಿಧುನಿಂದ ಕಾಂಗ್ರೆಸ್ ನಾಶವಾದರೆ, ರಾಜ್ಯದಲ್ಲಿ ಆ ಪಕ್ಷವನ್ನು ನಾಶ ಮಾಡಲು ಸಿದ್ಧರಾಮಯ್ಯ ಇದ್ದಾರೆ. ಡಿ. ಕೆ. ಶಿವಕುಮಾರ್, ಸಿದ್ಧರಾಮಯ್ಯ ಅವರ ಕಾಲದಲ್ಲೇ ಕಾಂಗ್ರೆಸ್ ನಾಶವಾಗಲಿದೆ ಎಂದರು.

ಈ ಬಾರಿಯ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿನಿರೀಕ್ಷೆಯಂತೆ ಫಲಿತಾಂಶ ಬಂದಿದೆ. ಮುಂದಿನ ಲೋಕಸಭಾ ಹಾಗೂ ಕರ್ನಾಟಕದ ವಿಧಾನಸಭಾ ಚುನಾವಣೆ ಮೇಲೆ ಈ ಪಂಚರಾಜ್ಯ ಚುನಾವಣಾ ಫಲಿತಾಂಶ ಪರಿಣಾಮ ಬೀರಲಿದೆ ಎಂದವರು ತಿಳಿಸಿದರು.

- Advertisement -

Latest News

error: Content is protected !!