Friday, June 28, 2024
Homeಕರಾವಳಿಉಡುಪಿಉಡುಪಿ: ಪರಿಷತ್ ಚುನಾವಣಾ ಪ್ರಚಾರ ಪುಸ್ತಕದಲ್ಲಿ ಬಿಜೆಪಿ ಮುಖಂಡನ ಫೋಟೋ ಮುದ್ರಿಸಿ ಹಂಚಿದ ಕಾಂಗ್ರೆಸ್!

ಉಡುಪಿ: ಪರಿಷತ್ ಚುನಾವಣಾ ಪ್ರಚಾರ ಪುಸ್ತಕದಲ್ಲಿ ಬಿಜೆಪಿ ಮುಖಂಡನ ಫೋಟೋ ಮುದ್ರಿಸಿ ಹಂಚಿದ ಕಾಂಗ್ರೆಸ್!

spot_img
- Advertisement -
- Advertisement -

ಉಡುಪಿ: ವಿಧಾನ ಪರಿಷತ್ ಚುನಾವಣೆಯಲ್ಲಿನ ಕಾಂಗ್ರೆಸ್ ಚುನಾವಣಾ ಪ್ರಚಾರದ ಪುಸ್ತಕದಲ್ಲಿ ಬಿಜೆಪಿ ಮುಖಂಡನ ಪೋಟೋ ಕಾಣಿಸಿಕೊಂಡಿದೆ.

ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ.ಕೆ. ಮಂಜುನಾಥ್ ಅವರ ಪ್ರಚಾರ ಪುಸ್ತಕದಲ್ಲಿ ಬಿಜೆಪಿಯ ಮಂಗಳೂರು ವಿಭಾಗದ ಉಸ್ತುವಾರಿ ಕೆ. ಉದಯ‌ಕುಮಾರ್ ಶೆಟ್ಟಿ ಪೋಟೋ ಬಳಸಲಾಗಿದೆ.

ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಬದಲು ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ ಪೋಟೊ ಬಳಕೆ ಮಾಡಲಾಗಿದೆ.

ಈಗಾಗಲೇ ಸಾವಿರಾರು ಪ್ರಚಾರ ಪುಸ್ತಕಗಳನ್ನು ಮುದ್ರಿಸಿ ಹಂಚಿರುವ ಕಾರಣ ಭಾವಚಿತ್ರ ಬದಲಾವಣೆಯ ಎಡವಟ್ಟಿನಿಂದ ಕಾಂಗ್ರೆಸ್ ಪಕ್ಷ ಮುಜುಗರ ಎದುರಿಸುವಂತಾಗಿದೆ.

- Advertisement -
spot_img

Latest News

error: Content is protected !!